ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಶ್ರೀತೇರು ಮಲ್ಲೇಶ್ವರಸ್ವಾಮಿ ಕೃಪಾ ಪೋಷಿತ ಎಲ್ಐಸಿ ಕಲಾ ಬಳಗ ಹಿರಿಯೂರು, ಎಲ್ಐಸಿ ಸ್ಪೋರ್ಟ್ ಮತ್ತು ರಿಕ್ರಿಯೇಷನ್ ಕ್ಲಬ್ ಹಾಗೂ ಎಲ್ಐಸಿ ಪ್ರತಿನಿಧಿಗಳ ಸಂಘದ ವತಿಯಿಂದ
ಕುರುಕ್ಷೇತ್ರ ಅರ್ಥಾತ್ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಇದೇ ತಿಂಗಳು ಅಕ್ಟೋಬರ್-19 ರಂದು ಶನಿವಾರ ರಾತ್ರಿ 8 ಗಂಟೆಗೆ ಹಿರಿಯೂರಿನ ನೆಹರೂ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ.
ಶ್ರೀಕೃಷ್ಣನ ಪಾತ್ರದಲ್ಲಿ ಬ್ಯಾಡರಹಳ್ಳಿ ಟಿ.ತಿಪ್ಪೇರುದ್ರಪ್ಪ, ಧರ್ಮರಾಯನಾಗಿ ಹೂವಿನಹೊಳೆ ಆರ್.ವೀರಣ್ಣ ಗೊಂಚಿಕಾರ್, ಭೀಮನ ಪಾತ್ರದಲ್ಲಿ ಸೋಮೇರಹಳ್ಳಿ ಉಮೇಶ್, ಅರ್ಜುನ ಪಾತ್ರದಲ್ಲಿ ಈರಪ್ಪ, ಅಭಿಮನ್ಯು ಪಾತ್ರದಲ್ಲಿ ಸಿ.ಎಸ್.ಪಾಂಡು, ವಿದುರನ ಪಾತ್ರದಲ್ಲಿ ಬ್ಯಾಡರಹಳ್ಳಿ ನಾಗರಾಜ್,
ಕರ್ಣನ ಪಾತ್ರದಲ್ಲಿ ಹೊಸಹಳ್ಳಿ ಕೆಂಪಣ್ಣ ಪೂಜಾರ್, ಶಕುನಿ ಪಾತ್ರದಲ್ಲಿ ಅಂಬಲಗೆರೆ ರಂಗನಾಥ, ಸೈಂಧವನಾಗಿ ಜೆಜಿಹಳ್ಳಿ ಗೋವಿಂದರಾಜ್, ಭೀಷ್ಮನಾಗಿ ದೇವರಕೊಟ್ಟ ಶಿವಣ್ಣ ಸೇರಿದಂತೆ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಿರಿಯೂರು ಎಲ್ಐಸಿ ಶಾಖೆಯ ಎಲ್ಲ ಅಧಿಕಾರಿ ವರ್ಗದವರು, ಎಲ್ಲ ಎಲ್ಐಸಿ ಪ್ರತಿನಿಧಿಗಳ ಸಹಕಾರ ಇರುತ್ತದೆ ಎಂದು ಸಂಯೋಜಕರು ತಿಳಿಸಿದ್ದಾರೆ.