ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಮನೆ ಬೀಗ ಮುರಿದು ಒಡವೆ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಕಳ್ಳನನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ಹೊಳಲ್ಕೆರೆ ನಿವಾಸಿ ಕವಿತಾ ಆನಂದಪ್ಪ ಇವರ ಮನೆಯ ಬೀಗಿ ಮುರಿದು ಆರೋಪಿ ಮನೆ ಕಟ್ಟುವ ಸೆಂಟರಿಂಗ್ ಕೆಲಸ ಮಾಡುವ ಹೊಸದುರ್ಗದ ಸೈಯದ್ ಫಜಲ್ 1.12 ಲಕ್ಷ ನಗದು, 16 ಗ್ರಾಂ ಚಿನ್ನಾಭರಣ, 80 ಗ್ರಾಮ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದನು.
ಪೊಲೀಸರು ಆರೋಪಿ ಕಳ್ಳನನ್ನು ಬಂಧಿಸಿ 1.25 ಲಕ್ಷ ರೂ.ನಗದು ವಶ ಪಡೆಯುವಲ್ಲಿ ಚಿಕ್ಕಜಾಜೂರು ಪೊಲೀಸರು ಯಶಸ್ವಿಯಾಗಿದ್ದಾರೆ.