Ad imageAd image

ಯಮನ ಪ್ರತಿರೂಪ ಮಾರ್ಟಿನ್, ಹಾಲಿವುಡ್ ಸಿನಿಮಾ ನೋಡಿದ ಅನುಭವ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಅರ್ಜುನ್ ಭಾರತೀಯ ನೌಕಾಪಡೆಯ ದಕ್ಷ ಅಧಿಕಾರಿ ಕರ್ತವ್ಯ ನಿಮಿತ್ತ ಪಾಕಿಸ್ತಾನಕ್ಕೆ ಹೋಗಿದ್ದ  ಸಂದರ್ಭದಲ್ಲಿ ಹೋರಾಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದಿರುತ್ತಾನೆ.

ಅರ್ಜುನ್ ಪ್ರತಿರೂಪದಂತೆ ಇರುವ ಗ್ಯಾಂಗ್ ಸ್ಟಾರ್ ಮಾರ್ಟಿನ್ ಇವರಿಬ್ಬರ ನಡುವೆ ನಡೆಯುವ ಸಾಹಸಮಯ ದೃಶ್ಯಗಳ ಚಿತ್ರೀಕರಣಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಕಥೆ ರಚಿಸಿದ್ದಾರೆ.

ಮಾರ್ಟಿನ್ ಹಾಗೂ ಅರ್ಜುನ್ ದ್ವಿಪಾತ್ರದಲ್ಲಿ ಧ್ರುವಸರ್ಜಾ ಅಭಿನಯಿಸಿದ್ದಾರೆ. ಮಾರ್ಟಿನ್ ಪಾತ್ರದಲ್ಲಿ ಧ್ರುವಸರ್ಜಾನ ದೈತ್ಯಾಕಾರದ ದೇಹಕ್ಕೆ ಎದುರಾಳಿಗಳು ನೊಣಕ್ಕೇ ಸಮಾನರಂತೆ ಕಂಡುಬರುತ್ತಾರೆ.

ಮಾರ್ಟಿನ್ ಎಂಬ ಖಳನಾಯಕ ಪಾತ್ರದಲ್ಲಿ ಧ್ರುವಸರ್ಜಾನ ಅಭಿನಯ ಯುವಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿದೆ. ಧ್ರುವಸರ್ಜಾ ಡೈಲಾಗ್ ಡೆಲಿವರಿ ಟೈಮಿಂಗ್ ಚೆನ್ನಾಗಿದೆ. ಆಕ್ಷನ್ ಹಾಗೂ ಕಾರು ಚೇಸಿಂಗ್ ದೃಶ್ಯಗಳು ಹಾಲಿವುಡ್ ಸಿನಿಮಾ ನೋಡಿದ ಅನುಭವ ಸಿಗುತ್ತದೆ.

ಸಿನಿಮಾದ  ಕ್ಲೈಮ್ಯಾಕ್ಸ್ ಅದ್ಬುತವಾಗಿ ಮೂಡಿಬಂದಿದೆ. ಕುಟುಂಬದ ಸದಸ್ಯರೊಂದಿಗೆ ನೋಡುವ ಸಿನಿಮಾ ಇದಾಗಿದೆ.‌ನಿರ್ಮಾಪಕರು ದೊಡ್ಡ ಪ್ರಮಾಣದಲ್ಲಿ ಹಣ ಕರ್ಚು ಮಾಡಿದ್ದಾರೆ. ಸಿನಿಮಾ ನೋಡಲು ಸಾಕಷ್ಟು ಕುತೂಹಲ ಮೂಡಿಸುತ್ತದೆ. ಪ್ರತಿಯೊರ್ವ ಕನ್ನಡಿಗರು ಹೆಮ್ಮೆಯಿಂದ ಮಾರ್ಟಿನ್ ಸಿನಿಮಾ ನೋಡಬೇಕು ಎಂಬುದೇ ನನ್ನ ಆಶಯ.

 ರಾಜ್ಯಾದ್ಯಂತ ಈ ಸಿನಿಮಾ ದೊಡ್ಡ ಪ್ರಮಾಣದ ಓಪನಿಂಗ್ ಪಡೆದುಕೊಂಡಿದೆ. ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಪ್ರಾಂತ್ಯದಲ್ಲಿಯು ಮಾರ್ಟಿನ್ ಸಿನಿಮಾ ಯಶಸ್ಸು ಕಾಣುತ್ತಿದೆ.

ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕುಗಳು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಹಳ್ಳಿಗಳ ಜನರು ಟ್ರಾಕ್ಟರ್ ನಲ್ಲಿ ಬಂದು ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಾದ್ಯಂತ ಯುವಕರು ಮಾರ್ಟಿನ್ ಸಿನಿಮಾ ನೋಡುತ್ತಾ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಚಿತ್ರ ವಿಮರ್ಶೆ-ರಘು ಗೌಡ 9916101265

- Advertisement -  - Advertisement - 
Share This Article
error: Content is protected !!
";