ಭ್ರಷ್ಟಾಚಾರದ ಆರೋಪ ಮಧ್ಯಯೂ 30 ವರ್ಷ ಕಸವಿಲೇಗೆ ಗುತ್ತಿಗೆ ನೀಡಲು ಸರ್ಕಾರದ ಒಪ್ಪಿಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರವು ಬೆಂಗಳೂರು ನಗರದ ಕಸ ವಿಲೇವಾರಿ ಮಾಡಲು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಗ್ರೀನ್ ಸಿಗ್ನಲ್ ಕೊಟ್ಟಿದೆ.

ಕಳೆದ ವಾರ ಬೃಹತ್‌ಬೆಂಗಳೂರು ಪಾಲಿಕೆ ಮುಂದಿನ 30 ವರ್ಷದ ಗುತ್ತಿಗೆ ಸಂಬಂಧ ತ್ಯಾಜ್ಯ ವಿಲೇವಾರಿ ಡ್ರಾಫ್ಟ್ ಸಲ್ಲಿಸಿತ್ತು. ಇದೀಗ ಪಾಲಿಕೆ ಕಾರ್ಯ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ಇತ್ತೀಚೆಗೆ ಗಂಭೀರ ಆರೋಪ ಮಾಡಿ 30 ವರ್ಷಕ್ಕೆ ಕಸ ವಿಲೇವಾರಿ ಗುತ್ತಿಗೆ ಯೋಜನೆ ಬಹುದೊಡ್ಡ ಭ್ರಷ್ಟಾಚಾರ ಎಂದು ಹೇಳಿಕೆ ನೀಡಿದ್ದರು.

 ಬಿಬಿಎಂಪಿ‌ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿ ರಾಜ್ಯ ಸರ್ಕಾರ ಕಸ ವಿಲೇವಾರಿ ಪ್ರಕ್ರಿಯೆಗೆ ಒಪ್ಪಿಗೆ ನೀಡಿದ್ದು ಇದೊಂದು  ಬಿಬಿಎಂಪಿ ಮಹತ್ವದ ಯೋಜನೆಯಾಗಿದೆ.

30 ವರ್ಷದ ಕಸದ ಟೆಂಡರ್ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ನಾವು ಈ ಬಗ್ಗೆ ಸವಿಸ್ತಾರವಾದ ಡ್ರಾಫ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು ಅಧಿಕೃತವಾಗಿ ಸಹಿಯಾಗಿ ವಾಪಸ್ ನಮ್ಮ‌ಕೈ ಸೇರಿದೆ.

ಮುಂದಿ‌ನ 30 ವರ್ಷದ ಕಸ ವಿಲೇವಾರಿ ಸಂಪೂರ್ಣ ಮಾಹಿತಿ ಡ್ರಾಫ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಶೀಘ್ರವೇ ಓಪನ್ ಟೆಂಡರ್ ಮಾಡಲು ಮುಂದಾಗುತ್ತೇವೆ. ಕಾನೂನು ಪ್ರಕಾರವೇ ಟೆಂಡರ್‌ಗೆ ಬಿಡ್ ನಡೆಸಿ ಗುತ್ತಿಗೆ ನೀಡುತ್ತೇವೆ ಎಂದು ಅವರು ತಿಳಿಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";