Ad imageAd image

ಏಷ್ಯಾದಲ್ಲಿಯೇ  2ನೇ ಅತಿ ಎತ್ತರದ ಏಕಶಿಲೆ ಬೆಟ್ಟ ಎಲ್ಲಿದೆ!?

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣಕ್ಕೆ ಬೆಟ್ಟ ಹೊಂದಿಕೊಂಡಿದೆ ಈ ಬೆಟ್ಟ ಏಕಶಿಲಾ ಬೆಟ್ಟ ಎಂದು ಪ್ರಖ್ಯಾತಿ ಗಳಿಸಿದೆ.‌ ಜಿಯಾಲಜಿಕಲ್ ಅನ್ವೇಷಣೆಯ ಮಾಹಿತಿ ಪ್ರಕಾರ ಏಷ್ಯಾ ಖಂಡದಲ್ಲಿಯೇ ಏಕಶಿಲೆಯ ಎರಡನೇಯ ಅತಿ ಎತ್ತರದ ಬೆಟ್ಟ ಎಂದು ಗುರುತಿಸಲಾಗಿದೆ ಸರಿಸುಮಾರು 4000 ಸಾವಿರ ಅಡಿಗಳಷ್ಟು ಎತ್ತರವಿದೆ ಎಂದು ಲೆಕ್ಕದಲ್ಲಿ ತಿಳಿದುಬಂದಿದೆ.

ಸಾವಿರ ವರ್ಷಗಳ ಹಿಂದೆ ದೊರೆಗಳ ಆಳ್ವಿಕೆಯ ಕಾಲದಲ್ಲಿ ಈ ಬೆಟ್ಟ ಸುರಕ್ಷತೆಯ ತಾಣ ಎಂದು ಗುರುತಿಸಲಾಗಿ ಬೆಟ್ಟಕ್ಕೆ ಕೋಟೆಯನ್ನು ಕಟ್ಟಲಾಗಿದೆ. ಈ ಕೋಟೆಯ ಹಿನ್ನೆಲೆ ರಾಜರ ಆಳ್ವಿಕೆಯ ಮಹತ್ವವಾದ ಇತಿಹಾಸವಿದೆ.

ಬೆಂಗಳೂರಿನಿಂದ ಮಧುಗಿರಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ 110 ಕಿಮೀ ಮತ್ತು ತುಮಕೂರಿನಿಂದ 50 ಕಿಮೀ ದೂರದಲ್ಲಿದೆ.

ಮಧುಗಿರಿಯ ಏಕಶಿಲಾ ಬೆಟ್ಟವನ್ನು ಹತ್ತಲು ಅನುಕೂಲವಾಗಲು ಬೆಟ್ಟದ ಮೆಟ್ಟಿಲು ಪಕ್ಕ ಕಬ್ಬಿಣದ ರೈಲಿಂಗ್ ವ್ಯವಸ್ಥೆಯು ಇದೆ ತುತ್ತ ತುದಿಯಲ್ಲಿ ಅತ್ಯಂತ ಕಡಿದಾದ ದಾರಿ ಇದೆ ಆ ಸ್ಥಳದಲ್ಲಿ ಯಾವುದೇ ರೀತಿಯ ಸುರಕ್ಷೆಯ ರೈಲಿಂಗ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಆ ಕಾರಣಕ್ಕೆ ಬಹಳಷ್ಟು ಎಚ್ಚರಿಕೆ ವಹಿಸಿಕೊಂಡು ಬೆಟ್ಟವನ್ನು ಹತ್ತಬೇಕಿದೆ.

ಬೆಂಗಳೂರು ಹಾಗೂ ತುಮಕೂರು ಸೇರಿದಂತೆ ಇತರೇ ಭಾಗಗಳಿಂದ ಬೆಟ್ಟ ಹತ್ತುವ ಸಾಹಸಿಗಳು ಮಧುಗಿರಿಗೆ ಶನಿವಾರ ಭಾನುವಾರ ಬರುವುದು ವಾಡಿಕೆಯಾಗಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಬೆಟ್ಟಕ್ಕೆ ರೋಪ್ ವ್ಯವಸ್ಥೆ ಮಾಡುವ ಮಾತುಕತೆ ನಡೆದಿದೆ. ಬೆಟ್ಟದ ಬುಡದಲ್ಲಿ ಮಾರಮ್ಮನ ದೇವಸ್ಥಾನವಿದೆ ಬಹಳಷ್ಟು ಪ್ರಭಾವಶಾಲಿಯಾಗಿ ಊರಿನ ರಕ್ಷಣೆಗೆ ದೇವಿ ಇದೆ ಜನರಲ್ಲಿ ಆಗಾಧವಾದ ಭಕ್ತಿಯಿದೆ.

ಸರಿಸುಮಾರು ಐವತ್ತು ವರ್ಷಗಳ ಹಿಂದೆ ನನ್ನ ಐದು ವರ್ಷದ ವಯಸ್ಸಿನ ದಿನಗಳಲ್ಲಿ ಮಾರಮ್ಮ ದೇವಸ್ಥಾನಕ್ಕೆ ನಾನು ಹೋಗಿದ್ದೇನೆ ಹಾಗೂ ಸ್ವಲ್ಪ ಅಂತರದಷ್ಟು ಬೆಟ್ಟವನ್ನು ಹತ್ತಿದೆನೆ ಆ ಒಂದು ನೆನಪಿನ ವಿಚಾರದಲ್ಲಿ ಈ ಸುದ್ದಿಯನ್ನು ವಿವರಿಸುತ್ತಿರುವೆ.

ಮಧುಗಿರಿ ತಾಲ್ಲೂಕಿನಲ್ಲಿ ಒಕ್ಕಲುತನಕ್ಕೆ ಹೆಚ್ಚಿನ ಮಹತ್ವವಿದೆ ಈ ಭಾಗದಲ್ಲಿ ಮಳೆ ಆಶ್ರಯದಲ್ಲಿ ಕಡಲೆಕಾಯಿ. ರಾಗಿ ಬೆಳೆಯುತ್ತಾರೆ ಬೋರ್ ವೆಲ್ ನೀರಿನಲ್ಲಿ ಅಡಿಕೆ.‌ ತೆಂಗು ಬೆಳೆಯಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಒಂದು ಕಾಲದಲ್ಲಿ ಮಧುಗಿರಿಯ ದಾಳಿಂಬೆ ಹೆಸರು ಪ್ರಖ್ಯಾತಿ ಪಡೆದಿತ್ತು.
ಲೇಖನ:ರಘು ಗೌಡ 9916101265

 

 

- Advertisement -  - Advertisement - 
Share This Article
error: Content is protected !!
";