ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಬಳ್ಳಾರಿ ರಸ್ತೆಯ ಸೂಜಿ ಮಲ್ಲೇಶ್ವರ ನಗರದ ಸುಜುಕಿ ಶೋರೂಂ ಮುಂಭಾಗದಲ್ಲಿ ನಿಂತಿದ್ದ ಲಾರಿಗೆ ಮೋಟಾರ್ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸೃಜನ್(19) ಎಂಬ ವಿದ್ಯಾರ್ಥಿ ತೀರ್ವವಾಗಿ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಖಾಸಗಿ ಆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.
ಮತ್ತೊರ್ವ ಗಾಯಾಳು ಎಸ್.ಕಿರಣ್ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಅಪಘಾತಕ್ಕೆ ಕಾರಣವಾದ ಲಾರಿಚಾಲಕನ ವಿರುದ್ದ ದೂರು ನೀಡಲಾಗಿದ್ದು, ಪಿಎಸ್‌ಐ ಧರೆಪ್ಪಬಾಳಪ್ಪದೊಡ್ಡಮನಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.