ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಏಕಾಏಕಿ ಎತ್ತರಕ್ಕೆ ಯಾರೊಬ್ಬರು ಬೆಳೆಯಲು ಸಾಧ್ಯವಿಲ್ಲ. ಚಿತ್ರದುರ್ಗ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರಾಗಿ ಕೃಷ್ಣಾರೆಡ್ಡಿ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದವರು.
ಕೋಟೆ ನಾಡಿನ ಮಧ್ಯ ಕರ್ನಾಟಕದ ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ನೂರಾರು ರಸ್ತೆಗಳು ಇಂದು ಕೃಷ್ಣಾರೆಡ್ಡಿ ಅವರ ಹೆಜ್ಜೆ ಗುರುತುಗಳನ್ನು ಸಾರಿ ಹೇಳುತ್ತಿವೆ. ಕುಗ್ರಾಮಗಳಿಗೂ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮನಸ್ಥಿತಿಯ ಡಾ.ಕೃಷ್ಣಾರೆಡ್ಡಿ ಅವರ ಸೇವೆ ಇಡೀ ರಾಜ್ಯಕ್ಕೆ ವಿಸ್ತರವಾಗಬೇಕಿದೆ.
ಡಾ.ಕೃಷ್ಣಾರೆಡ್ಡಿ ನಿವೃತ್ತ ಲೋಕೋಪಯೋಗಿ ಇಲಾಖೆಯ ಸೆಕ್ರೆಟರಿ ಇವರ ಕಾರ್ಯಕ್ಷಮತೆಯನ್ನು ಸದುಪಯೋಗ ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕೃಷ್ಣಾರೆಡ್ಡಿ ಅವರನ್ನು ಹೆಚ್ಚುವರಿಯಾಗಿ ಕರ್ನಾಟಕ ಸ್ಟೇಟ್ ರೋಡ್ ಡೆವಲಪ್ಮೆಂಟ್ ಸಿಇಒ ಆಗಿ ನೇಮಕ ಮಾಡಿಕೊಂಡಿದೆ.
ಕೃಷ್ಣಾರೆಡ್ಡಿ ಅವರ ಕಾರ್ಯ ಕ್ಷಮತೆಯನ್ನು ಮೆಚ್ಚಿ ಮಾಲ್ಡೀವ್ಸ್ ನಲ್ಲಿ ನಡೆದ ಜಾಗತಿಕ ಸಾಧಕರ ಸಮಾವೇಶದಲ್ಲಿ ಶ್ರೀ ಕೃಷ್ಣಾರೆಡ್ಡಿ ಅವರ ಕಾರ್ಯ ಕ್ಷಮತೆಯನ್ನು ಮೆಚ್ಚಿ ಗ್ಲೋಬಲ್ ಅಚೀವರ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ವಿಚಾರದಲ್ಲಿ ಅಭಿನಂದಿಸುತ್ತೇನೆ.
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭೋವಿ ಗುರುಪೀಠದ ಶ್ರೀಶ್ರೀಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಹಾಗೂ ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದೆ ಹಾಗೂ ಮಾಜಿ ಸಚಿವೆ ಜಯಮಾಲಾ ಸೇರಿದಂತೆ ಮಾಲ್ಡೀವ್ಸ್ ನಲ್ಲಿರುವ ಗಣ್ಯರು ಉಪಸ್ಥಿತರಿದ್ದರು.
ಕೃಷ್ಣಾರೆಡ್ಡಿ ಅವರು ಚಿತ್ರದುರ್ಗಕ್ಕೆ ಸಮೀಪ ಇರುವ ಬೆಳಗಟ್ಟ ಊರಿನವರು. ಸರಿಸುಮಾರು 35 ವರ್ಷಗಳ ಹಿಂದೆ ಚಿತ್ರದುರ್ಗ ನಗರದ ಕೆಳಗೋಟೆ ವಾಸಿಗಳು ನನ್ನನ್ನು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ಪದಾಧಿಕಾರಿಗಳಾದ ಸಂಪತ್, ಡಿ ಟಿ ವೆಂಕಟೇಶ್ ಇನ್ನು ಹಲವು ನನ್ನ ಸ್ನೇಹಿತರಿಗೆ ಆತ್ಮೀಯರು ಹೌದು.
ಕೃಷ್ಣಾರೆಡ್ಡಿ ಅವರು ಈ ಹಿಂದೆ ಚಿತ್ರದುರ್ಗ ಲೋಕೋಪಯೋಗಿ ಇಲಾಖೆಯಲ್ಲಿ ಎಕ್ಸೆವಿಟಿವ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಬಿಬಿಎಂಪಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ಅವದಿಯಲ್ಲಿ ಪ್ರಥಮವಾಗಿ ಬೆಂಗಳೂರಿನ ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣವಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಲ್ಲಿಯು ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಲೇಖನ-ರಘು ಗೌಡ 9916101265