ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಸಮೀಪವಿರುವ ಕೆಂಗುಂಟೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಶನಿವಾರ ಬಾಗಿನ ಅರ್ಪಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಎಲ್.ಬಿ.ರಾಜಪ್ಪ ಕೆಂಗುಂಟೆ ಇವರು ಕೆರೆಗೆ ಬಾಗಿನ ಸಲ್ಲಿಸಿ ಮಾತನಾಡುತ್ತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಸುತ್ತಮುತ್ತಲಿನ ಬೋರ್‌ಗಳಲ್ಲಿ ನೀರಿನ ಮಟ್ಟ ಜಾಸ್ತಿಯಾಗಲಿದೆಯಲ್ಲಿದೆ ಕೃಷಿ ಹಾಗೂ ಜಾನುವಾರುಗಳಿಗೆ ನೀರಿಗೆ ಸಮಸ್ಯೆಯಿಲ್ಲ ಎಂದು ಹೇಳಿದರು.
ಎನ್.ಸಿ.ರಾಜಪ್ಪ, ಮಹೇಶ್ವರಪ್ಪ, ಮಲ್ಲಾಡಿಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ರವಿ, ಸುಧಾ, ನಿರ್ಮಲ, ರವಿ, ಶಿಲ್ಪ, ಹೇಮಾವತಿ, ಯಶೋಧ ಇವರುಗಳು ಬಾಗಿನ ಅರ್ಪಣೆ ಸಂದರ್ಭದಲ್ಲಿ ಹಾಜರಿದ್ದರು.