ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಥಾನಮಾನಗಳ ಹಿನ್ನೋಟ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಈ ದಿನಕ್ಕೆ ಸರಿಯಾಗಿ 52 ವರ್ಷಗಳ ಹಿಂದಿನ ದಿನಮಾನದಲ್ಲಿ ಪ್ರಥಮವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರದ ಸಂವಿಧಾನದ ಆಡಳಿತದಲ್ಲಿ ಸತತವಾಗಿ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಪ್ರಥಮವಾಗಿ ಶಾಸಕರಾದ ಅವದಿಯಲ್ಲಿ ರಾಜ್ಯ ಸರ್ಕಾರದ ಲಿಡ್ಕರ್ ನಿಗಮಕ್ಕೆ ಅಧ್ಯಕ್ಷರಾಗಿದ್ದರು. 5 ಬಾರಿ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.
2 ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಅವಕಾಶದಿಂದ ವಂಚಿತರಾಗಿದ್ದಾರೆ. 2 ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಂಘಟನೆ ಮಾಡಿದ್ದಾರೆ. 2 ಬಾರಿ ಲೋಕಸಭಾ ಸಂಸದರಾಗಿ. 1 ಬಾರಿ ಕೇಂದ್ರದಲ್ಲಿ ಸಚಿವರಾಗಿ. 1ಬಾರಿ ಲೋಕಸಭೆಯ ಆಡಳಿತಕ್ಕೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ರಾಜ್ಯಸಭಾ ಸಂಸದರಾಗಿ. ರಾಜ್ಯಸಭಾ ಸಂಸತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಈ ವಿಚಾರಗಳು ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯವಾಗಿ ಬೆಳೆದು ಬಂದಿರುವ ಹಿನ್ನೆಲೆ.
2007 ರಲ್ಲಿ ಮಲ್ಲಿಕಾರ್ಜುನ್ ಖರ್ಗೆಜೀ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ಜನ್ಮದಿನಾಚರಣೆ ದಿನದಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಆರ್ ಮಂಜುನಾಥ್ ಅವರೊಂದಿಗೆ ನಾನು ಸೇರಿದಂತೆ ಇನ್ನು ಕೆಲವು ಸ್ನೇಹಿತ ರಾಜಕೀಯ ಮುಖಂಡರುಗಳು ಬೆಂಗಳೂರಿನಲ್ಲಿರುವ ಮಲ್ಲಿಕಾರ್ಜುನ ಖರ್ಗೆಜೀ ಅವರ ನಿವಾಸಕ್ಕೆ ತೆರಳಿ ಜನ್ಮದಿನಾಚರಣೆಯ ಗೌರವವನ್ನು ದೊಡ್ಡ ಪ್ರಮಾಣದಲ್ಲಿ ಅರ್ಪಿಸಿದ್ದೆವು.
ಆ ಸಂದರ್ಭದಲ್ಲಿ ರಾಜ್ಯ ರಾಜಕೀಯ ವಿದ್ಯಮಾನಗಳು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ರಾಜಕೀಯದ ವಿಚಾರಗಳು ಚರ್ಚೆಗೆ ಬಂದಿತ್ತು ಈ ಎಲ್ಲಾ ಸೂಕ್ಷ್ಮತೆಯ ರಾಜಕೀಯ ವಿಚಾರಗಳು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಉತ್ತಮ ವಿಚಾರಗಳಾಗಿದ್ದವು.
ಕಿರು ಲೇಖನ-ರಘು ಗೌಡ 9916101265