ಗುಂಪುಗಾರಿಕೆಯಿಂದ ಹೊರ ಬಂದಾಗ ಮಾತ್ರ ಪಕ್ಷ ಸದೃಢವಾಗಿ ಕಟ್ಟಲು ಸಾಧ್ಯ

News Desk

ಚಂದ್ರವಳ್ಳಿ ನ್ಯೂಸ್, ಸೊರಬ:
ಪಕ್ಷ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಅಗತ್ಯವಿದ್ದು
, ಆಂತರಿಕ ಗುಂಪುಗಾರಿಕೆಯಿಂದ ಹೊರ ಬಂದಾಗ ಮಾತ್ರ ತಾಲೂಕಿನಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಹೇಳಿದರು.

        ಭಾನುವಾರ ಪಟ್ಟಣದ ಅಲೇಕಲ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

        ಪಕ್ಷ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ, ಪಕ್ಷದಲ್ಲಿ ಇದ್ದು ಇತರೆ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲವಿಗೆ ಶ್ರಮಿಸಿದರೇ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಗೆಲವು ಹೇಗೆ ಸಾದ್ಯ.? ಎಂದು ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ಪ್ರಸ್ತಾಪಿಸಿ ಮಾತನಾಡಿ ಹೀಗಿದ್ದರು ಪಕ್ಷ ವಿರೋಧಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮುಖಂಡರು ಮಣೆಹಾಕುತ್ತಾರೆ. ತಾಲೂಕಿನಲ್ಲಿ ಇನ್ನೂಬ್ಬರು ತಾವೇ ಅಧ್ಯಕ್ಷರು ಎಂದು ಹೇಳಿಕೊಂಡು ಸಭೆ ಸಮಾರಂಭ ಮಾಡಿದರೆ ಜಿಲ್ಲಾ ಮುಖಂಡರು ಅವರಿಗೂ ಬೆಂಬಲ ನೀಡುತ್ತಾರೆ ಹೀಗಿರುವುವಾಗ ಪಕ್ಷದಲ್ಲಿ ಒಗ್ಗಟ್ಟು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು?

        ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಂತಾಗಿ ವಂಶ ಪಾರಂಪರ್ಯ ರಾಜಕಾರಣ, ಹಣಕಾಗಿ ಮತಹಾಕುವ ಸಂಪ್ರಾದಾಯ, ಸಮಾಜ ಸೇವೆ ಇಲ್ಲದವರಿಗೆ ಟಿಕೆಟ್, ಜಾತೀಯತೆ ಹೀಗೆ ಮಾನವೀಯ ಸಂಬಂಧಗಳು ಇಲ್ಲದಂತಾಗಿ ಪಕ್ಷಕ್ಕೆ ಮತ ಹಾಕಬೇಕಾದವರು ವಿರೋಧಿಗಳಿಗೆ ಮತಹಾಕುತ್ತಾರೆ. ಎಲ್ಲಿವರಗೆ ಪಕ್ಷಕ್ಕಾಗಿ ಹೋರಾಟ ಇರುವುದಿಲ್ಲ ಅಲ್ಲಿವರಗೆ ಪಕ್ಷದ ಸಂಘಟನೆ ಕಷ್ಟವಾಗುತ್ತದೆ. ಇದನ್ನು ಜಿಲ್ಲಾ ಮುಖಂಡರು ಗಂಭಿರವಾಗಿ ಪರಿಗಣಿಸಿ ಪಕ್ಷದ ಬಲವರ್ಧನೆಗೆ ಸಹಕರಿಸಬೇಕಿದೆ ಎಂದರು.

         ತಾಲೂಕಿನಲ್ಲಿ ಅಧಿಕಾರಕ್ಕಾಗಿ ೪೦ ವರ್ಷಗಳಿಂದ ಪೈಪೋಟಿ ನಡೆಯುತ್ತಿದೆ ಅಭಿವೃದ್ದಿ ಮಾತ್ರ ಆಗುತ್ತಿಲ್ಲ. ಜನ ಸಮಾನ್ಯರ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ. ಜನಸೇವೆ ಮಾಡಲು ಅಧಿಕಾರ ಬೇಡ. ಅದರಂತೆ ಜನ ಸೇವೆ ಮಾಡುತ್ತ ಬಂದಿರುವೆ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಕಾರ್ಯಕರ್ತ ಒಡಗೂಡಿ ಮಾಡುವುದಾಗಿ ಹೇಳಿದರು. 

        ಸೊರಬ ತಾಲೂಕು ಜೆಡಿಎಸ್ ವೀಕ್ಷಕ ಪಿ. ನಾಗೇಶ್ ಮಾತನಾಡಿ ಪಕ್ಷದ ಸಂಘಟನೆಗೆ ಸದಸ್ಯವ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಜಾಧ್ಯಕ್ಷರ  ಸೂಚನೆಯ ಮೆರೆಗೆ ಜಿಲ್ಲಾದ್ಯಂತ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಕಾರ್ಯಕರ್ತರ ಹಾಗೂ ಮುಖಂಡರ ನಡುವೆ ಅಂತರಿಕ ಭಿನ್ನಾಭಿಪ್ರಾಯಗಳು ಇದ್ದು ಸ್ಥಳೀಯ ಸಮಸ್ಯೆಗಳನ್ನು ಬಗಿಹರಿಸುವುದಾಗಿ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರು ಹೇಳಿದ್ದಾರೆ. ಸದಸ್ಯತ್ವ ಅಭಿಯಾನಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದರು.

        ತಾಲೂಕು ಜೆಡಿಎಸ್ ಅಧ್ಯಕ್ಷ ಗಣಪತಿ ಟಿ.ಜಿ ಕೊಪ್ಪ ಮಾತನಾಡಿ ಪಕ್ಷ ಸಂಘಟನೆಗೆ ನಾವು ಯಾವಾಗಲು ಸಿದ್ದರಿದ್ದೆವೆ. ಪ್ರತಿ ಹಳ್ಳಿಗೂ ತೆರಳಿ ಸದಸ್ಯತ್ವ ಮಾಡಿಸಲು ಇಂದಿನಿಂದಲೆ ಪ್ರಾರಂಬಿಸುತ್ತೇವೆ. ಪಕ್ಷ ನೀಡಿದ ಗುರಿ ಮುಟ್ಟಲು ಪ್ರಾಮಾಣಿಕವಾಗಿ ಪ್ರಯತ್ನಿಸುತೇವೆ. ಆದರೆ ಪಕ್ಷದ ಆಂತರಿಕ ಜಗಳ ಸರಿಪಡಿಸುವುದು ನಮ್ಮಿಂದ ಸಾಧ್ಯವಿಲ್ಲ ಜಿಲ್ಲಾ ಮುಖಂಡರು ಈ ಬಗ್ಗೆ ನಮಗೆ ಒತ್ತಡ ಹೇರದೆ ಪಕ್ಷ ಸಂಘಟನೆಗೆ ಅವಕಾಶ ನೀಡಬೇಕು. ಇದ್ದಕ್ಕೆ ಜಿಲ್ಲಾ ಸಂಘಟನೆ ಸಹಕರಿಸಬೇಕು ಎಂದರು.

        ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಸಂಗಯ್ಯ ಮಾತನಾಡಿ ಕಾರ್ಯಕರ್ತರು ಮುಖಂಡರೆಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಮುಖಂಡರಾದ ಆನಂದ ನಾಯ್ಕ್ ದ್ಯಾವಾಸ, ಸಿ.ಪಿ ತುಳಜಪ್ಪ, ಗಣೇಶ್ ಓಂಪಿಕಲ್ಸ್, ಬಸವನಗೌಡ ಪಾಟೀಲ್, ಸುಧೀರ್ ಭಟ್, ರಾಮಪ್ಪ ಕೊಡಕಣಿ, ಮಹೇಶ ಹೆಗಡೆ, ಹರೀಶ, ಶಿವಮೂರ್ತಿ ಮನಮನೆ, ಅಶೋಕ, ವಿಷ್ಣು, ಎಂ. ಕುಮಾರ್, ನಾಗಪ್ಪ ಮತ್ತಿತರರು ಇದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";