ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧ ಸಭಾಭವನದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಅವರು ಮಂಗಳವಾರ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು.
ರೈಲ್ವೆ ಸುರಕ್ಷತೆ ಖಾತ್ರಿಪಡಿಸುವ ಈ ನಿರ್ಣಾಯಕ ಚರ್ಚೆಯ ನಂತರ, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದ, ಜಾಗರೂಕತೆ ವಹಿಸಿದ ಹಾಗೂ ಕರ್ತವ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ, ಅನುಕರಣೀಯ ಸುರಕ್ಷತಾ ಪ್ರಜ್ಞೆ ತೋರಿದ ವಲಯದ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗಳ ನೌಕರರಿಗೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅವರು ಉದ್ಯೋಗಿಗಳಿಗೆ “ತಿಂಗಳ ಸುರಕ್ಷತಾ ವ್ಯಕ್ತಿ” ಪ್ರಶಸ್ತಿ ನೀಡಿ ಗೌರವಿಸಿದರು.
ಅಪಾಯಕಾರಿ ಸಂದರ್ಭಗಳು ಗಂಭೀರ ಅಪಘಾತಗಳಾಗಿ ಬದಲಾಗುವ ಮೊದಲು ಅದನ್ನು ನಿಲ್ಲಿಸಲು ನೌಕರರು ತ್ವರಿತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಆಯಾ ವಿಭಾಗಗಳಿಂದ ಪಟ್ಟಿ ಮಾಡಲಾಗಿದೆ:
ಹುಬ್ಬಳ್ಳಿ ವಿಭಾಗ:
- ನಾರಾಯಣ್ ನಾಯಕ್ (ಸಹಾಯಕ, ಕ್ಯಾಸಲ್ ರಾಕ್)
- ವಿನಯ್ ಕುಮಾರ್ ಚೌಧರಿ (ಸಹಾಯಕ, ಕ್ಯಾಸಲ್ ರಾಕ್)
- ಪ್ರಬೀಶ್ ಪಿ. (ಲೋಕೋ ಪೈಲಟ್, ವಾಸ್ಕೋ ಡ ಗಾಮಾ)
- ವಿಶ್ವನಾಥ್ ಮಂಜುನಾಥ್ (ಹಿರಿಯ ಸಹಾಯಕ ಲೋಕೋ ಪೈಲಟ್, ವಾಸ್ಕೋ ಡ ಗಾಮಾ)
- ಆರ್.ವಿ.ಹುಗ್ಗಿ ( ಹೆಡ್ ಕಾನ್ಸ್ಟೇಬಲ್, ಆರ್ ಪಿಎಫ್ ಗದಗ)
- ಸುಶೀಲ್ ಕುಮಾರ್ (ಕಾನ್ಸ್ಟೇಬಲ್, ಆರ್ ಪಿಎಫ್ ಪೋಸ್ಟ್ ಬೆಳಗಾವಿ).
ಬೆಂಗಳೂರು ವಿಭಾಗ:
ಲಕ್ಷ್ಮೀಕಾಂತ ಎನ್.ವಿ (ಗೇಟ್ ಕೀಪರ್)
ವಿಜಯ್ ಕುಮಾರ್ ಮೊಹೌರ್ (ಲೋಕೋ ಪೈಲಟ್)
ಸಾಕೆ ರಾಜೇಶ್ (ಹಿರಿಯ ಸಹಾಯಕ ಲೋಕೋ ಪೈಲಟ್)
ನಾಗರಾಜ್ (ಟೆಕ್ನಿಷಿಯನ್)
ಮೈಸೂರು ವಿಭಾಗ:
ಸುಭಾಷ್ ಚಂದ್ರ ಗುಪ್ತಾ (ಗೇಟ್ ಮ್ಯಾನ್)
ರಾಮಗೋಪಾಲಾಚಾರಿ (ಗ್ಯಾಂಗ್ ಮೇಟ್)
ಪೂರ್ಣ್ ಸಿಂಗ್ ಮೀನಾ (ಟ್ರೈನ್ ಮ್ಯಾನೇಜರ್)
ಅರವಿಂದ್ ಶ್ರೀವಾಸ್ತವ ಅವರು ಈ ಉದ್ಯೋಗಿಗಳ ಅತ್ಯುತ್ತಮ ಜಾಗರೂಕತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು. ನೈಋತ್ಯ ರೈಲ್ವೆಯಲ್ಲಿ ಸುರಕ್ಷತೆಯು ಉನ್ನತ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದರು ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.