ಚಂದ್ರವಳ್ಳಿ ನ್ಯೂಸ್, ತುಮಕೂರು :
ತಾಲೂಕಿನ ಇತಿಹಾಸ ಪ್ರಸಿದ್ದ ಗೂಳೂರು ಗ್ರಾಮದ ಜನತೆ ಗ್ರಾಮದ ಕೆರೆಗೆ ನೀರು ಹರಿದು ಬರಲು ಶಾಸಕರು ಕೈಗೊಂಡ ಕಾರ್ಯಕ್ಕೆ ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.
ಗಣಪತಿ ಪ್ರಾತಿಷ್ಠಾಪನೆಯಿಂದ ಇತಿಹಾಸ ಪ್ರಸಿದ್ದಿ ಹೊಂದಿರುವ ಗೂಳೂರು ಗ್ರಾಮದ ಕೆರೆಗೆ ಪ್ರತಿವರ್ಷ ಇತಿಹಾಸ ಪ್ರಸಿದ್ದಿ ಗಣಪತಿ ಮೂರ್ತಿಯನ್ನ ವಿಸರ್ಜನೆ ಮಾಡುತಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಆದರೆ ಗ್ರಾಮದ ಕೆರೆಗೆ ನೀರು ಹರಿದು ಬರುವ ಕಾಲುವೆಗಳಿಗೆ ಕಸ ಕಡ್ಡಿ ತುಂಬಿಕೊಂಡು ಕಾಲುವೆ ದಾರಿಯಲ್ಲಿ ಸರಗವಾಗಿ ನೀರು ಬರಲು ಅಡ್ಡಿಯುಂಟಾದ ಕಾರಣ ಕೆರೆಗೆ ನೀರು ಹರಿದು ಬರುತ್ತಿರಲಿಲ್ಲ.
ಜೊತೆಗೆ ನೀರು ಬರುವ ಎಲ್ಲಾ ದಾರಿಗಳು ಬಂದ್ ಆದ ಕಾರಣ ಕೆರೆಗೆ ನೀರು ಹರಿದು ಬರುವುದು ನಿಂತುಹೋಗಲಾಗಿದ್ದು ಇದನ್ನು ಸರಿಪಡಿಸಿ ಕೆರೆಗೆ ನೀರು ಬರುವಂತೆ ಮಾಡಲು ಗೂಳೂರು ಕೆರೆ ಅಭಿವೃದ್ಧಿ ಸಂಘದ ಕಾರ್ಯಕರ್ತರು ಹರ ಸಾಹಸ ಪಟ್ಟರು ಕೆರೆಗೆ ನೀರು ಬರುವ ಕಾಲುವೆಗಳನ್ನ ಸರಿಪಡಿಸಿ ನೀರುಬರುವಂತೆ ಮಾಡಾಗಲಿಲ್ಲ.
ನಂತರದಲ್ಲಿ ಕೆರೆ ಅಭಿವೃದ್ಧಿ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಈ ವಿಷವನ್ನ ಶಾಸಕರಾದ ಸುರೇಶ್ ಗೌಡರವರ ಬಳಿ ತಿಳಿಸಿದಾಗ ಇದನ್ನ ಮನಗಂಡ ಶಾಸಕ ಸುರೇಶ್ ಗೌಡರವರು ತಕ್ಷಣ ಕಾರ್ಯ ಪ್ರವೃತರಾಗಿ ಸಂಬಧಪಟ್ ಅಧಿಕಾರಿಗಳಿಗೆ ತಿಳಿಸಿ ಕಸಕಡ್ಡಿಗಳಿಂದ ಕಟಿಕೊಂಡಿದ್ದ ಕಾಲುವೆದಾರಿಯನ್ನ ಸ್ವಚ್ಛಗೊಳಿಸಿ ಕೆರೆಗೆ ನೀರು ಬರಯವಂತೆ ಮಾಡಿರುತ್ತಾರೆ.
ಜೊತೆಗೆ ಕೆರೆ ಕೊಡಿಗೆ ನಿರ್ಮಿಸಲಾಗಿದ್ದ ಹಳೆಯ ಗೇಟ್‌ನ್ನು ಹೊಸದಾಗಿ ಪೊಲೀಸ್ ಭದ್ರತೆಯೊಂದಿಗೆ ಮತ್ತೆ ಅಳವಡಿಸಿ ಪೋಲಾಗಿ ಹರಿಯುತ್ತಿದ್ದ ನೀರನ್ನು ಗೂಳೂರು ಕೆರೆಯತ್ತ ಹರಿಯುವಂತೆ ಮಾಡಿರು ಕಾರಣ ಗೂಳೂರು ಗ್ರಾಮಸ್ಥರು ಶಾಸಕ ಬಿ ಸುರೇಶ್ ಗೌಡ ಅವರರಿಗೆ ಅಭಿನಂದನೆಗಳನ್ನ ತಿಳಿಸಿದ್ದಾರೆ.