ಉಪ ನೊಂದಣಾಧಿಕಾರಿಗಳು ಆಸ್ತಿ ನೊಂದಣಿ ಮಾಡದಿರುವುದನ್ನು ವಿರೋಧಿಸಿ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ನಗರದ ಕೊಳಗೇರಿ ನಿವಾಸಿಗಳಿಗೆ ಕೆ.ಎಸ್.ಡಿ.ಬಿ. ದಾವಣಗೆರೆ ಉಪ ವಿಭಾಗದಿಂದ ಹಕ್ಕುಪತ್ರಗಳನ್ನು ವಿತರಿಸಿದ್ದರು ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಇ-ಸೊತ್ತು ಇಲ್ಲವೆಂದು ನೊಂದಾವಣೆ ಮಾಡದಿರುವುದನ್ನು ವಿರೋಧಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎಂದು ಮಂಗಳವಾರ ಪ್ರತಿಭಟನೆ ನಡೆಸಿ ಶಿರಸ್ತೆದಾರ್‌ಗೆ ಮನವಿ ಸಲ್ಲಿಸಲಾಯಿತು.

೨೦೨೧-೨೨ ನೇ ಸಾಲಿನಲ್ಲಿ ಕೊಳಚೆ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ದಿನಾಂಕ : ೯-೯-೨೦೨೪ ರಿಂದ ಈಚೆಗೆ ಕ್ರಯಪತ್ರವಿಲ್ಲದೆ ಇ-ಸೊತ್ತು ಮಾಡುವುದಿಲ್ಲವೆಂಬ ಸಬೂಬು ಹೇಳುತ್ತಿರುವುದರಿಂದ ಕೊಳಗೇರಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ನೊಂದಾವಣೆ ಮಾಡುವಂತೆ ಉಪ ನೊಂದಣಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೂ ಆದೇಶಿಸುವಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆ.ಕೆ.ಎನ್.ಎಸ್.ಎಸ್. ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಮನವಿ ಮಾಡಿದರು.

ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಉಪಾಧ್ಯಕ್ಷ ಎನ್.ರಂಗಸ್ವಾಮಿ, ಜಾನಪದ ಜಾಗೃತಿ ಪರಿಷತ್ ರಾಜ್ಯಾಧ್ಯಕ್ಷ ಹೆಚ್.ಪ್ಯಾರೇಜಾನ್, ಮೈಲಾರಪ್ಪ, ಇಮಾಮ್‌ಸಾಬ್, ಶಬಿನಾಬಿ ರಜಿಯಾಬಿ, ರಾಧಮ್ಮ, ಇಮ್ರಾನ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";