ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಹಾಗೂ ಹಳಿಯೂರು ರೈಲ್ವೇ ನಿಲ್ದಾಣಗಳ ಮಧ್ಯ ರೈಲಿಗೆ ಸಿಕ್ಕಿ ಸುಮಾರು 65 ರಿಂದ 70 ವರ್ಷ ವಯೋಮಾನದ ಅಪರಿಚಿತ ವ್ಯಕ್ತಿ ಮೃತಪಟ್ಟ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಪಟ್ಟ ವ್ಯಕ್ತಿ 5.6 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ತಲೆಯಲ್ಲಿ ಒಂದು ಇಂಚು ಬಿಳಿ ಮತ್ತು ಕಪ್ಪು ಕೂದಲು ಹಾಗೂ ಮುಖದ ಮೇಲೆ ಕುರುಚಲು ಗಡ್ಡ ಮೀಸೆ ಇರುತ್ತದೆ.
ಕಪ್ಪ ಬಣ್ಣದ ಟೀ ಶರ್ಟ್ ಧರಿಸಿದ್ದು, ಅದರ ಮೇಲೆ ಸೂಪರ್ ಡಿಆರ್‌ವೈ ಸ್ಟೇಟ್ ಜಪಾನ್ 23 ಟೋಕಿಯೋ ಎಂದು ಇಂಗ್ಲೀಷ್‌ನಲ್ಲಿ ಬರೆದಿದೆ. ತುಂಬು ತೋಳಿನ ಬನಿಯಾನ್, ಪ್ರೋಮ್ಯಾಕ್ಸ್ ಕಂಪನಿಯ ಅಂಡರ್‌ವೇರ್, ಬಿಳಿ ಬಣ್ಣದ ಪಂಚೆ ಮತ್ತು ಕಂದು ಬಣ್ಣದ ಚಪ್ಪಲಿಗಳು ಇರುತ್ತವೆ.
ಮೃತರ ಗುರುತು ಪತ್ತೆಯಾದವರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08192-259643 ಅಥವಾ ಮೊಬೈಲ್ ಸಂಖ್ಯೆ 9480802123, 9632277966 ಕರೆ ಮಾಡುವಂತೆ ತಿಳಿಸಿದೆ.