ನಿರಾಶ್ರಿತರ ಬಾಳಲ್ಲಿ ಬೆಳಕು ತಂದ ಜಿಲ್ಲಾ ಆಸ್ಪತ್ರೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಗೋನೂರಿನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಜಿಲ್ಲಾ ಆಸ್ಪತ್ರೆಯ ನೇತ್ರ ತಜ್ಞರು ಮತ್ತು ತಂಡದವರು ಕಾಲಕಾಲಕ್ಕೆ ಭೇಟಿ ನೀಡುತ್ತಿದ್ದು, ರಾಷ್ಟ್ರೀಯ ಅಂದತ್ವ ನಿವಾರಣ ಕಾರ್ಯಕ್ರಮದಡಿಯಲ್ಲಿ ನಿರಾಶ್ರಿತರ ನೇತ್ರ ಪರೀಕ್ಷೆ ಮಾಡಿ ದೃಷ್ಟಿ ದೋಷ ಹಾಗೂ ಕಣ್ಣಿನ ಪೊರೆ ಇರುವ 19 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ನೇತ್ರ ತಜ್ಞ  ಡಾ. ಪ್ರದೀಪ್ ಅವರು ಯಶಸ್ವಿಯಾಗಿ ಮಾಡಿ ನಿರಾಶ್ರಿತರಿಗೆ ಬೆಳಕು ನೀಡಿದ್ದಾರೆ.

ಇದರ ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿರುತ್ತಾರೆ. ವೃದ್ಧರ ಬಾಳಿಗೆ ಬೆಳಕು ನೀಡಿದ ನೇತ್ರ ತಜ್ಞರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ ಪ್ರಶಂಸಿದ್ದಾರೆ.

ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ರವೀಂದ್ರ, ಆರ್ಎಂಒ ಡಾ.ಆನಂದ್ ಪ್ರಕಾಶ್, ನೇತ್ರ ತಜ್ಞರಾದ ಡಾ. ಶಿಲ್ಪ, ನೇತ್ರಾಧಿಕಾರಿ ಕೆ.ಸಿ ರಾಮು, ಪುಷ್ಪಲತಾ, ಡಿವೈಡಿಎಚ್ಇಓ ಸುನಂದಾದೇವಿ, ಶುಶ್ರೂಷಾಧಿಕಾರಿ ಲಕ್ಷ್ಮೀ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರರೆಡ್ಡಿ, ಸಿಂಧು, ಶಾರದಾ, ಧಮೇರ್ಂದ್ರ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಇದ್ದರು.

 

- Advertisement -  - Advertisement - 
Share This Article
error: Content is protected !!
";