ಹೋಟೆಲ್ ಉದ್ಯಮಿ ಕೆ.ಜಿ.ರವಿ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಹೋಟೆಲ್ ಉದ್ಯಮಿ ಹಾಗು ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಕೆ.ಜಿ.ಎಲ್.ರವಿ(ಕ್ಯಾತ್ಸಂದ್ರ ಗಂಗಣ್ಣ
, ಲಿಂಗಣ್ಣ ರವಿ) 57 ವರ್ಷ, ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಕ್ಷವನ್ನು ಬಲವಾಗಿ ಕಟ್ಟುವ ಉದ್ದೇಶದಿಂದ ಇತ್ತೀಚೆಗೆ ಜಿಲ್ಲಾ ಜೆಡಿಯು ಕಚೇರಿಯನ್ನು ಸಹ ಕರಿಬಸವೇಶ್ವರ ವೃತ್ತದಲ್ಲಿ ತೆರೆದಿದ್ದರು. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಜೆಡಿಯು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಜೆ.ಹೆಚ್.ಪಟೇಲ್, ಎಂ.ಪಿ.ನಾಡಗೌಡ, ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜ.ಪಟೇಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಮೂಲತಃ ತುಮಕೂರಿನವರೇ ಆದ ಕೆಜಿಎಲ್ ರವಿ ಅವರು ನಗರದ ಅರಳೇಪೇಟೆಯಲ್ಲಿ ವಾಸವಾಸವಾಗಿದ್ದು ಹೊರಪೇಟೆ ಸರ್ಕಲ್ ನಿಂದ ಕೆ.ಆರ್ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಚಂದ್ರಮೌಳೇಶ್ವರ ಹೆಸರಿನ ಹೋಟೆಲ್ ಒಂದನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ನಡೆಸುತ್ತಿದ್ದರು.

ಓರ್ವ ಪುತ್ರ, ಪುತ್ರಿ, ಪತ್ನಿ, ಸಹೋದರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಅಕ್ಟೋಬರ್-24ರ ಗುರುವಾರ ಬೆಳಗ್ಗೆ ಕುಣಿಗಲ್ ರಸ್ತೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement -  - Advertisement -  - Advertisement - 
Share This Article
error: Content is protected !!
";