ಪಡಿತರಕ್ಕಾಗಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ದಿನಗಟ್ಟಲೆ ಕಾದ ಸಾರ್ವಜನಿಕರು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರ ಹಾಗು ಗ್ರಾಮಾಂತರದಲ್ಲಿ ಸರ್ವರ್ ಸಮಸ್ಯೆಯಿಂದ  ಸರ್ಕಾರ ಉಚಿತವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ  ನೀಡುವ ಪಡಿತರ ಅಕ್ಕಿ  ದವಸ ಧಾನ್ಯಗಳಿಗಾಗಿ  ಕೂಲಿ ಕಾರ್ಮಿಕ  ಘಂಟೆ ಗಟ್ಟಲೆ ನಿಲ್ಲವುದರಿಂದ  ಸಾರ್ವಜನಿಕರಿಗೆ ವಲಯದಲ್ಲಿ  ನರಕ  ಯಾತನೆ ಯಾಗಿದೆ.

 ಸರ್ಕಾರಿ ನ್ಯಾಯಬೆಲೆ ಅಂಗಡಿಯ ಅವ್ಯವಸ್ಥೆ ಹಾಗೂ ಸರ್ವರ್ ಸಮಸ್ಯೆ ಯಿಂದಾಗಿ ದಿನಗೂಲಿ ಮಾಡುವ ಕಾರ್ಮಿಕ ಬೆಳಗಿನ ಜಾವ 3 ಘಂಟೆಯಿಂದ ಸರತಿ ಸಾಲಿನಲ್ಲಿ ನಿಂತು ಪಡಿತರ ಅಕ್ಕಿ ಹಾಗು ರಾಗಿಯನ್ನು

 ಪಡೆಯುವಷ್ಟುರಲ್ಲಿ ಸರ್ವರ್ ಸಮಸ್ಯೆಯಾಗಿದೆ ಕಾದು ಕುಳಿತ ಕಾರ್ಮಿಕ ಅ ದಿನದ ಕೂಲಿಯು ಇಲ್ಲ ದಂತಾಗಿ ಹೀಗೆ 4 ರಿಂದ 5 ದಿನಗಳು ಕಾದು ಕುಳಿತರು ಪಡಿತರ ದವಸ ದಾನ್ಯ ನಿಗದೆ ಇತ್ತ ಕೂಲಿಯು ಇಲ್ಲದೆ  ಬಡ ಕುಟುಂಬಗಳು ನಷ್ಠದಲ್ಲಿ ನರಳುತ್ತಿದ್ದಾರೆ.

ಅದಕ್ಕಾಗಿ ರಾಜ್ಯ  ಸರ್ಕಾರ   ಹೊಸ ತಾಂತ್ರಿಕ ಬದಲಾವಣೆಗಾಗಿ   ಎ ಟಿ ಎಂ ನಂತೆ   ಸ್ಮಾರ್ಟ್ ಕಾರ್ಡ್ ಮುಖಾಂತರ  ದವಸ ಧಾನ್ಯಗಳನ್ನು ವಿತರಣೆ ಮಾಡುವುದರಿಂದ ಕೂಲಿ ಕಾರ್ಮಿಕ ಬಡ ಕುಟುಂಬಗಳಿಗೆ ಸಹಕಾರ ವಾಗಬಹುದು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

  ಸರ್ವರ್ ಸಮಸ್ಯೆಯಿಂದಾಗಿ  ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ರಾಗಿ ದವಸಗಳಿಗಾಗಿ  ಕೆಲಸ ಕಾರ್ಯಗಳು ಬಿಟ್ಟು  ದಿನಗಟ್ಟಲೆ ವಾರ ಗಟ್ಟಲೆ ನಿಲ್ಲುವ ಪರಿಸ್ಥಿತಿ ಎದುರಾಗಿದೆ ಹಗಲು ರಾತ್ರಿ ಎನ್ನದೆ ಪಡಿತರ ದವಸ ದಾನ್ಯಕ್ಕಾಗಿ ಕಾದು ಕುಳಿತರು ಸರ್ವರ್ ಇಲ್ಲ ಎನ್ನುವ ಒಂದೆ ಸಂದೇಶವಾದರೆ ದಿನ ಸುರಿಯುವ ಮಳೆಯಿಂದ ಕೂಲಿ ಕಾರ್ಮಿಕ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ ಅದರಿಂದ ಕೂಡಲೆ ರಾಜ್ಯ ಸರ್ಕಾರ ಹೂಸ ನೀತಿಯನ್ನು ಜಾರಿಗೆ ತರುವುದು ಉತ್ತಮ ಎನ್ನುತ್ತಾರೆ ಕೂಲಿ ಕಾರ್ಮಿಕ ಎಚ್‌.ಎಸ್ ರಾಮಕೃಷ್ಣ.

 

- Advertisement -  - Advertisement -  - Advertisement - 
Share This Article
error: Content is protected !!
";