ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಭಾಷೆ
ಕನ್ನಡ ಶಾಲೆಯ ಉಳಿಸಲು ಬನ್ನಿ ಕನ್ನಡ ಮಕ್ಕಳಿರಾ
ಕನ್ನಡ ಭಾಷೆಯ ಬೆಳೆಸಲು ಬನ್ನಿ ಕನ್ನಡ ಮಕ್ಕಳಿರಾ(ಪ)
ಕನ್ನಡ ಶಾಲೆಯು ಅನ್ನದ ನೆಲೆಯು ಕನ್ನಡ ಮಕ್ಕಳಿರಾ
ಕನ್ನಡ ಭಾಷೆಯು ಒಡಲಿನ ಸೆಲೆಯು ಕನ್ನಡ ಮಕ್ಕಳಿರಾ(ಪ)
ಕನ್ನಡ ಶಾಲೆಯು ಕರುಳಿನ ಕುಡಿಯು ಕನ್ನಡ ಮಕ್ಕಳಿರಾ
ಕನ್ನಡ ಭಾಷೆಯು ಕಂದನ ನುಡಿಯು ಕನ್ನಡ ಮಕ್ಕಳಿರಾ(ಪ)
ಕನ್ನಡ ಶಾಲೆಯು ಹಳ್ಳಿಯ ಜೀವ ಕನ್ನಡ ಮಕ್ಕಳಿರಾ
ಕನ್ನಡ ಭಾಷೆಯು ಹಳ್ಳಿಯ ಉಸಿರು ಕನ್ನಡ ಮಕ್ಕಳಿರಾ(ಪ)
ಶಾಲೆಯು ಅಳಿದರೆ ಊರೇ ಅಳಿದಂತೆ ಕನ್ನಡ ಮಕ್ಕಳಿರಾ
ಭಾಷೆ ಅಳಿದರೆ ನಾಡೇ ಅಳಿದಂತೆ ಕನ್ನಡ ಮಕ್ಕಳಿರಾ(ಪ)
ಶಾಲೆಯ ಉಳಿಸೋಣ
ಶಾಲೆಯ ಬೆಳೆಸೋಣ
ಕನ್ನಡ ಮಕ್ಕಳಿರಾ
ಭಾಷೆ ಉಳಿಸೋಣ
ಭಾಷೆಯ ಬೆಳೆಸೋಣ
ಕನ್ನಡ ಮಕ್ಕಳಿರಾ(ಪ)
ಕನ್ನಡ ನುಡಿ ಕಾಯಿ ಕನ್ನಡ
ಮಕ್ಕಳಿರಾ
ಕನ್ನಡ ಗಡಿ ಕಾಯಿ ಕನ್ನಡ ಮಕ್ಕಳಿರಾ(ಪ)
ಕನ್ನಡಕೆ ಹೋರಾಡಿ ಕನ್ನಡ ಮಕ್ಕಳಿರಾ
ಕನ್ನಡವ ಕಾಪಾಡಿ ಕನ್ನಡ ಮಕ್ಕಳಿರಾ(ಪ)
ಅನ್ನದ ಋಣವ ತೀರಿಸಿ ಕನ್ನಡ ಮಕ್ಕಳಿರಾ
ಮಣ್ಣಿನ ಋಣವ ತೀರಿಸಿ ಕನ್ನಡ ಮಕ್ಕಳಿರಾ
ಕನ್ನಡ ಕನ್ದಡ ಕನ್ನಡ ಎನ್ನಿ
ಕನ್ನಡ ಮಕ್ಕಳಿರಾ
ಕನ್ನಡ ಕನ್ನಡ ಅನ್ನದ ಭಾಷೆ
ಕನ್ನಡ ಮಕ್ಕಳಿರಾ
ಕನ್ನಡ ಕನ್ನಡ ಅರಿವಿನ ಭಾಷೆ
ಕನ್ನಡ ಮಕ್ಕಳಿರಾ
ಕನ್ನಡ ಕನ್ನಡ ವಿಧ್ಯೆಯ ಭಾಷೆ ಕನ್ನಡ ಮಕ್ಕಳಿರಾ
ಕವಿತೆ:ಡಾ. ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಕನ್ನಡ ಉಪನ್ಯಾಸಕರು, ಚಿತ್ರದುರ್ಗ.