ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತಮ ಸಮಾಜಕ್ಕಾಗಿ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ನಗರ ಪ್ರದೇಶಗಳಲ್ಲಿ ಸುಮಾರು 25 ವರ್ಷಗಳ ಇತ್ತಿಚಿನ ದಿನಗಳಲ್ಲಿ ಮನೆ ಹಾಗೂ ಇನ್ನಿತರೆ ಉಪಯೋಗಿ ಕಟ್ಟಡಗಳನ್ನು ಕಟ್ಟುವ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳ ಅನುಸಾರವಾಗಿ ಕಟ್ಟಡಗಳನ್ನು ಕಟ್ಟದೆ ಇರುವುದರಿಂದ ಅತಿಹೆಚ್ಚು ಮಳೆ ಬಂದಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ತೊಂದರೆ ಕಂಡುಬಂದಿವೆ.
ನಗರಾಭಿವೃದ್ಧಿಯಲ್ಲಿ ಕಟ್ಟಡದ ಲೈಸನ್ಸ್ ನೀಡಿದ ನಂತರ ಯಾವೊಬ್ಬ ಅಧಿಕಾರಿಗಳು. ನಗರಾಭಿವೃದ್ಧಿ ಸದಸ್ಯರು ಹಾಗೂ ನಗರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಯಾರೊಬ್ಬರು ಕಟ್ಟಡದ ನೀತಿ ನಿಯಮಗಳ ಬಗ್ಗೆ ವೀಕ್ಷಣೆ ಮಾಡುವುದಿಲ್ಲ ಹಾಗೂ ನೀತಿ ನಿಯಮಗಳ ಅನುಸಾರವಾಗಿ ಕಟ್ಟಡಗಳನ್ನು ಕಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದಿಲ್ಲ ಈ ವಿಚಾರದಲ್ಲಿ ದ್ವನಿ ಎತ್ತದೆ ಇರುವ ಕಾರಣಕ್ಕೆ ರಸ್ತೆ.
ಚರಂಡಿ ಎಲ್ಲವು ಒತ್ತುವರಿ ಆಗುತ್ತಿದೆ, ಚರಂಡಿ ಹಾಗೂ ರಸ್ತೆಗಳ ಕಾಮಗಾರಿ ನಿರ್ಮಾಣದ ಸಂದರ್ಭದಲ್ಲಿ ಮಳೆ ನೀರು ಚರಂಡಿಗೆ ಹರಿದು ಹೋಗುವ ಹಾಗೆ ಉತ್ತಮ ತಾಂತ್ರಿಕ ನೀತಿ ಅನುಸರಿಸುತ್ತಿಲ್ಲ. ಈ ಎಲ್ಲಾ ಕಾರಣಕ್ಕೆ ಮಳೆ ನೀರು ಚರಂಡಿಗೆ ಹರಿದು ಹೋಗದೆ ರಸ್ತೆಯಲ್ಲಿ ಹೋಗುತ್ತಿದೆ.
ಈ ಎಲ್ಲಾ ಅವಘಡಗಳಿಗೆ ಮುಖ್ಯ ಕಾರಣ ದುರಾಡಳಿತದ ಲಂಚಾವತಾರ. ಜನರು ಒತ್ತುವರಿಯ ದೂರಾಲೋಚನೆ ಬಿಡಬೇಕು. ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳ ಆಡಳಿತದಲ್ಲಿ ಪ್ರಾಮಾಣಿಕತೆ ಇದ್ದರೆ ನಮ್ಮ ಸುತ್ತಮುತ್ತಲಿನ ಪ್ರಾಂತ್ಯವನ್ನು ಉತ್ತಮ ಗೊಳಿಸಲು ಸಾದ್ಯವಿದೆ.
ಲೇಖನ:ರಘು ಗೌಡ 9916101265