ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟ ವ್ಯವಸ್ಥೆ ವಿರುದ್ದ ಬಿ.ಜೆ.ಪಿ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಗಳು ಹಾಗೂ ಪಡಿತರ ಚೀಟಿ ರದ್ದುಗೊಳಿಸಿದ ವಿರುದ್ದ ದೊಡ್ಡಬಳ್ಳಾಪುರ ತಾಲ್ಲೂಕು ಬಿ.ಜೆ.ಪಿ ಘಟಕದ ವತಿಯಿಂದ ತಾಲ್ಲೂಕು ಕಛೇರಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
 

ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ನಗರ ಬಿ.ಜೆ.ಪಿ ಅಧ್ಯಕ್ಷ ಬಿ.ಮುದ್ದಪ್ಪ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡ ವರ್ಗಗಳ,ಶೋಷಿತರ ಬದುಕು ಅತ್ಯಂತ ದುಸ್ತರವಾಗಿದೆ ಅದರಲ್ಲೂ ಇತ್ತೀಚಿಗೆ ಪಡಿತರ ಚೀಟಿ ರದ್ದು ನೆಪದಲ್ಲಿ ಉಳ್ಳವರನ್ನು ಹೊರತುಪಡಿಸಿ ಬಡವರ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಸರ್ಕಾರ ಅವರು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದೆ.

ತಾಲ್ಲೋಕಿನಲ್ಲಿ ಸುಮಾರು ಸಾವಿರಕ್ಕು ಹೆಚ್ಚು ಪಡಿತರ ಚೀಟಿಗಳನ್ನು ಸ್ಥಳೀಯ ಆಹಾರ ವಿಭಾಗ ರದ್ದು ಪಡಿಸಿದೆ.ಅದರಲಿ ಅತಿ ಕಡು ಬಡುವರ ಪಡಿತರ ಚೀಟಿಗಳು ಹೆಚ್ಚು ರದ್ದಾಗಿದೆ.ಆಹಾರ ಇಲಾಖೆಯ ಅವೈಜ್ಞಾನಿಕ ಸರ್ವೆಯಿಂದ ಬಡವರಿಗೆ,ಮದ್ಯಮ ವರ್ಗದವರಿಗೆ ಅಕ್ಕಿ ಸೇರಿದಂತೆ ದವಸ ದಾನ್ಯಗಳು ಸಿಗದಂತಾಗಿದೆ.

ಬಿಟ್ಟಿ ಬಾಗ್ಯಗಳ ಯೋಜನೆಗಳಿಗೆ ಹಣ ಒದಗಿಸಲಾಗದೆ ಬಡವರ ಪಡಿತರ ಚೀಟಿ ರದ್ದುಗೊಳಿಸುವ ಮೂಲಕ ಬಡವರಿಗೆ ವಂಚಿಸುವ ಕೆಲಸ ಮಾಡಿದೆ.ದಿನ ಬೆಳಗಾಯಿತೆಂದರೆ ಒಂದಲ್ಲ ಒಂದು ಹಗರಣಗಳು ಸಿದ್ದರಾಮಯ್ಯ ಸರ್ಕಾರದಿಂದ ಹೊರಬೀಳುತ್ತಿವೆ.

ಬರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಜನವಿರೋದಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಿಂದ ತೊಲಗಬೇಕಿದೆ‌.ಈ ಭ್ರಷ್ಟ ವ್ಯವಸ್ಥೆ ವಿರುದ್ದ ಬಿ.ಜೆ.ಪಿ ಪ್ರತಿಭಟನೆಯನ್ನು ಮುಂದುವರೆಸಲಿದೆ ಎಂದು ಮುದ್ದಪ್ಪ ಹೇಳಿದರು.

 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಾರಿ ಭ್ರಷ್ಟಾಚಾರ ನಡೆಸಿದ್ದು ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯುವವರೆಗು ಬಿ.ಜೆ.ಪಿ ನಿರಂತರವಾಗಿ ಹೋರಾಡಲಿದೆ.ಈಗಾಗಲೆ ವಾಲ್ಮೀಕಿ,ಮೂಡ ಸೇರಿದಂತೆ ಹಲವರು ಹಗರಣಗಳನ್ನು ಬಿ.ಜೆ.ಪಿ ಬಯಲಿಗೆಳದಿದೆ.

ತಮ್ಮದು ಜನಪರ,ಬಡವರ ಪರ ಸರ್ಕಾರವೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಪಡಿತರ ಚೀಟಿ ರದ್ದುಗೊಳಿಸುವ ಮೂಲಕ ಜನ ವಿರೋಧಿ ಸರ್ಕಾರವೆಂದು ಈಗಾಗಲೆ ಸಾಬೀತು ಮಾಡಿದ್ದಾರೆ.ಆದ್ದರಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸಲು ಯಾವುದೇ ನೈತಿಕತೆ ಇಲ್ಲ.ಈಗಾಗಿ ಈ ಕೂಡಲೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಗೋಪಿ ಒತ್ತಾಯಿಸಿದರು.

ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಟಿ.ಡಿ ಮುನಿಯಪ್ಪ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಬಡವರ,ದಲಿತರ,ರೈತರ,ಹಿಂದುಳಿದ ವರ ವಿರೋಧಿ ಸರ್ಕಾರವಾಗಿದೆ.ಬಿ.ಜೆ.ಪಿ.ಆಡಳಿತದಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನು ರದ್ದುಗೊಳಿಸಿ ಬಿಟ್ಟಿ ಬಾಗ್ಯಗಳ ಯೋಜನೆಯ ನೆಪದಲ್ಲಿ  ರಾಜ್ಯವನ್ನು ಲೂಟಿ ಮಾಡುವ ಮೂಲಕ ರಾಜ್ಯವನ್ನು ದಿವಾಳಿ ಹಂತಕ್ಕೆ ತಂದಿದೆ.

ಸರ್ಕಾರದ ಯಾವುದೇ ಉಚಿತ ಯೋಜನೆಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ದೊರೆಯಿತ್ತಲ್ಲ.ಕೆಲ ಯೋಜನೆಗಳನ್ನು ಉಚಿತವಾಗಿ ಕೊಟ್ಟ ಹಾಗೆ ಮಾಡಿ ಆಹಾರ ಧಾನ್ಯ,ಎಣ್ಣೆ,ವಿದ್ಯುತ್ ಸೇರಿದಂತೆ ಎಲ್ಲಾ ದಿನಬಳಕೆ ದರಗಳನ್ನು ಹೆಚ್ಚಿಸಿ ಬಡವರ್ಗಕ್ಕೆ ತೀರ ಅನ್ಯಾಯ ಮಾಡಿದೆ.ಈಗಾಗಲೇ ಅತಿವೃಷ್ಟಿ,ಅನಾವೃಷ್ಟಿಯಿಂದ ರಾಜ್ಯದ ರೈತರು, ಮದ್ಯಮ ವರ್ಗದವರು ಕೂಲಿ ಕಾರ್ಮಿಕರು ಬದುಕು ನಡೆಸಲು ಒದ್ದಾಡುತ್ತಿರುವಾಗ ಸರ್ಕಾರದ ಅವೈಜ್ಞಾನಿಕ ನೀತಿ ಹಾಗು ದೈನಂದಿನ ವಸ್ತುಗಳ ದರ ಹೆಚ್ಚಳ ರಾಜ್ಯದ ಸಾರ್ವಜನಿಕರನ್ನು ತೀರ ಅದೋಗತಿಗೆ ತಳ್ಳಿದೆ.ಹಾಗಾಗಿ ಸಿದ್ದರಾಮಯ್ಯ ಸರ್ಕಾರ ಪತನಗೊಳ್ಳುವವರೆಗೆ ಬಿ.ಜೆ.ಪಿ ವಿರಮಿಸುವುದಿಲ್ಲ ಎಂದು ಹೇಳಿದರು.

ಪ್ರತಿಭಟನಾಕಾರರು ಕಛೇರಿ ವೃತ್ತದಿಂದ ಪಾದಯಾತ್ರೆ ಮೂಲಕ ತಹಶಿಲ್ದಾರ್ ಕಛೇರಿಗೆ ತೆರಳಿ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಹಾಗು ನಗರಸಭಾ ಸದಸ್ಯ ಬಂತಿ ವೆಂಕಟೇಶ್,ಮಾಜಿ ನಗರಸಭಾ ಸದಸ್ಯ ವೆಂಕಟರಾಜು,ಮಹಿಳಾ ಮುಖುಂಡರಾದ ಗಿರಿಜಾ ಅನಂತ ಪದ್ಮನಾಭ, ಮೂಖುಂಡರಾದ ಮಂಜುನಾಥ್, ಕಾಡನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮನು,ನಗರಸಭಾ ಸದಸ್ಯರಾದ ವತ್ಸಲ, ಪದ್ಮನಾಭ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";