ಚಂದ್ರವಳ್ಳಿ ನ್ಯೂಸ್, ನವದೆಹಲಿ:
ತುಮಕೂರು ಲೋಕಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಹೊಣೆಯನ್ನು ಹೊಂದಿರುವ ಹಾಗೂ ಕ್ಷೇತ್ರದ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣರವರ ವಿಶೇಷ ಕಾಳಜಿಯಿಂದ ಒಟ್ಟು ರೂ 35.61 ಕೋಟಿ ರೂ ವೆಚ್ಚದಲ್ಲಿ
ಹೆಗ್ಗರೆ ಗೇಟ್ ರೈಲ್ವೆ ನಿಲ್ದಾಣ ರಸ್ತೆ ಮೇಲ್ಸೇತುವೆ ( ಎಲ್ ಸಿ ನಂ 44) ಕಾಮಗಾರಿಗೆ ಅಂದಾಜು ಮೊತ್ತ – ರೂ 28.53 ಕೋಟಿ ಹಾಗೂ ಬಿಳಿಪಾಳ್ಯ ಗೇಟ್, ರಸ್ತೆ ಕೆಳಸೇತುವೆ (ಎಲ್ ಸಿ ನಂ. 50) ಕಾಮಗಾರಿಗೆ ಅಂದಾಜು ಮೊತ್ತ – ರೂ 7.08 ಕೋಟಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.
ಈ ಕಾಮಗಾರಿಯು ಸಂಪೂರ್ಣ ಶೇಕಡ 100 ರಷ್ಟು ರೈಲ್ವೆ ವೆಚ್ಚದ ಅನುದಾನದಡಿಯಲ್ಲಿ ನಡೆಯಲಿದೆ. ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು ಈಗಾಗಲೆ ಸರಿ ಸುಮಾರು ರೂ. 440 ಕೋಟಿ ಯೋಜನಾ ಮೊತ್ತವನ್ನು ROB , RUB ಅಭಿವೃದ್ಧಿಗೆ ತಮ್ಮ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ದೊರಕಿಸಿ ಕೊಟ್ಟಿದ್ದಾರೆ.
ಇದಕ್ಕೆ ಸಂಪೂರ್ಣ ಬೆಂಬಲವಾಗಿ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ಸೋಮಣ್ಣನವರು ತುಮಕೂರಿನ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.