ಚಂದ್ರವಳ್ಳಿ ನ್ಯೂಸ್, ಹರಿಹರ:
ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತ ಕಚೇರಿ ಹಾಗೂ ಹರಿಹರ ನಗರಸಭೆ ಮಧ್ಯೆ ಅವಿನಾಭಾವ ಸಂಬಂಧ ಮೂಡಿತೋ ಎನ್ನುವಂತೆ ವಾತಾವರಣ ನಿರ್ಮಾಣವಾಗಿದೆ. ಇದರ ಹಿನ್ನೆಲೆಯಲ್ಲಿ ಶುಕ್ರವಾರ ಲೋಕಾಯುಕ್ತ ದಾಳಿಯ ವೇಳೆ ನಗರಸಭೆಯ ಹಿರಿಯ ಕಂದಾಯ ನಿರೀಕ್ಷಕ ನಾಗೇಶ್ ಹಾಗು ಕಂದಾಯ ಅಧಿಕಾರಿ ಯು. ರಮೇಶ್ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ.
ಅ. 23 ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ಟೌನ್ ನಿವಾಸಿ ರಾಜು ಲಕ್ಷ್ಮಣ್ ಕಾಂಬ್ಳೆಯವರು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರಿ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿಗಳು ದಾಳಿ ನಡೆಸಿ ನಾಗೇಶ್ ರವರು 20 ಸಾವಿರ ರೂ ಲಂಚ ಸ್ವೀಕರಿಸುವಾಗ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಲೋಕಾಯುಕ್ತರು.
ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬು ನಗರದ ಹೊರ ವಲಯದ ಎನ್.ಹೆಚ್ ರಸ್ತೆಯಲ್ಲಿರುವ ಶ್ರೀದೇವಿ ಪೆಟ್ರೋಲ್ ಬಂಕ್‌ನ ನಿವೇಶನದ ಸುಮಾರು 3-4 ವರ್ಷಗಳ ಕಂದಾಯವನ್ನು ಪಾವತಿಸುವುದು ಬಾಕಿ ಇದ್ದು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ಯು.ರಮೇಶ ರವರುಗಳು ಸದರಿ ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ 1,39,400 ರೂ,ಗಳನ್ನು ಪಾವತಿಸಬೇಕಾಗುತ್ತೆ ಎಂದು ತಿಳಿಸಿದ್ದಾರೆ.
ಸದ್ಯ 2020-21 ನೇ ಸಾಲಿನ ಕರದಂತೆ ಇಲ್ಲಿಯವರೆಗೆ ಲೆಕ್ಕ ಹಾಕಿ ಬರುವ ಕಂದಾಯ ಮೊತ್ತವನ್ನು 1,39,400 ರಲ್ಲಿ ಕಡಿಮೆ ಮಾಡಿ, ಉಳಿದ ಹಣದಲ್ಲಿ ಶೇ. 50ರಷ್ಟು ಅಂದರೆ ಸುಮಾರು 50-60 ಸಾವಿರ ರೂ,ಗಳ ಮೊತ್ತದಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದು, ದೂರುದಾರರಿಗೆ ಲಂಚದ ಹಣವನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ ಇದ್ದ ಕಾರಣ ನಗರಸಭೆ ವಿರುದ್ಧ ಕಾನೂನು ಕ್ರಮ ಜರುಗಿಸಲು ಅ.24 ರಂದು ನೀಡಿದ ದೂರಿನ ಮೇರೆಗೆ ದಾಳಿ ನಡೆದಿದೆ. ಶುಕ್ರವಾರ ದೂರುದಾರರಿಂದ 20,000 ರೂ. ನಾಗೇಶ್ ಹಾಗು ಯು. ರಮೇಶ್ ಲಂಚ ಸ್ವೀಕರಿಸಿದ್ದು, ದಾಳಿ ಮಾಡಿ ಲೋಕಾಯುಕ್ತರು ಆರೋಪಿಗಳನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ದಾಳಿಯು ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕೆ.ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಸಿ.ಮಧುಸೂದನ್, ಪ್ರಭು ಬ.ಸೂರಿನ ಮತ್ತು ಪಿ. ಸರಳ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಗೇಶ್ ಮತ್ತು ಯು. ರಮೇಶ್ ರವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿರುತ್ತಾರೆ ಎಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.