ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ ಎಸ್ ಎಂ ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ತೆರುವಾದ ಅಧ್ಯಕ್ಷರ ಸ್ಥಾನಕ್ಕೆ ದಿನಾಂಕ 26.10.2024 ಚುನಾವಣೆ ನೆಡೆಸಲಾಯಿತು.
ಚುನಾವಣೆಯಲ್ಲಿ ಹಾಲಿ ಸದಸ್ಯ ರಾಮಮೂರ್ತಿಯವರು ಒಬ್ಬರೆ ಉಮೇದುವಾರಿಕೆ ಸಲ್ಲಿಸಲಾಗಿತ್ತು ಆದ್ದರಿಂದ ರಾಮಮೂರ್ತಿಯವರು ಸರ್ವ ಸದಸ್ಯ ಬೆಂಬಲದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ನೂತನ ಅಧ್ಯಕ್ಷರಿಗೆ ಎಸ್ ಎಂ ಗೊಲ್ಲಹಳ್ಳಿಯ ಹಾಲು ಉತ್ಪಾಧಕರ ಸಹಕಾರ ಸಂಘದ ಸದಸ್ಯರು ಉಪಾಧ್ಯಕ್ಷರು ಹಾಗು ಊರಿನ ಗ್ರಾಮಸ್ಥರು ಶುಭ ಕೂರಿದ್ದಾರೆ.