ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್ ಕಾಯ್ದೆಯಡಿಯಲ್ಲಿ ಬಡವರ, ರೈತರ, ದಲಿತರ ಭೂಮಿ ಕಿತ್ತುಕೊಳ್ಳುತ್ತಿರುವ ಕಾಂಗ್ರೆಸ್ ಸಚಿವ ಜಮೀರ್ ಅವರು ರಾಜೀನಾಮೆನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ್ ಎಂ.ಕಾರಜೋಳ ಆಗ್ರಹ ಮಾಡಿದ್ದಾರೆ.
ಸಚಿವ ಜಮೀರ್ ಅವರು ಟಿಪ್ಪು ಸುಲ್ತಾನ್‌ನಂತೆ ನಡೆದುಕೊಳ್ಳುತ್ತಿದ್ದಾರೆ.
ದಲಿತರಿಗೆ ಭೂಮಿ ಒದಗಿಸಬೇಕಾಗಿದ್ದ ಸರ್ಕಾರ ಇಂದು ವಕ್ಫ್ ಆಸ್ತಿಗಾಗಿ ಅವರಿಂದಲೇ ಭೂಮಿ ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ತುಘಲಕ್ ಮಾದರಿಯ ಆಡಳಿತ ನಡೆಸುತ್ತಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ವಕ್ಫ್ ಕಾಯ್ದೆಯ ಕುರಿತು ಪರಾಮರ್ಶಿಸಲು ಸಂಸತ್ತಿನಲ್ಲಿ ಜಂಟಿ ಸದನ ಸಮಿತಿ ರಚಿಸಿರುವ ನಡುವೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ, ದಲಿತರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ಅಸಾಂವಿಧಾನಿಕವಾಗಿದೆ ಎಂದು ಅವರು ಟೀಕಿಸಿದ್ದಾರೆ.