ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತವನ್ನು ಇಸ್ಲಾಮೀಕರಣ ಮಾಡುವ ಏಕೈಕ ಉದ್ದೇಶ ಹೊಂದಿದ್ದ ಟಿಪ್ಪು ಸುಲ್ತಾನ್ ದೀಪಾವಳಿ ಸಮಯದಲ್ಲಿ ಮಂಡ್ಯ ಜಿಲ್ಲೆಯ ಮಂಡ್ಯಮ್ ಐಯಂಗಾರ್ ಗಳು ಇದ್ದ ಗ್ರಾಮಕ್ಕೆ ಲಗ್ಗೆ ಇಟ್ಟು ಸಾವಿರಾರು ಜನವನ್ನು ಕೊಚ್ಚು ಹಾಕಿದ. ಟಿಪ್ಪುವಿನ ಕ್ರೌರ್ಯ ಎಷ್ಟರ ಮಟ್ಟಿಗೆ ಅವರ ಮೇಲೆ ಪ್ರಭಾವ ಬೀರಿದೆಯೆಂದರೆ ಇಂದಿಗೂ ಸಹ ಮಂಡ್ಯಮ್ ಐಯಂಗಾರ್ ಗಳು ದೀಪಾವಳಿ ಆಚರಣೆ ಮಾಡೋದಿಲ್ಲ ಎಂದು ಶಾಸಕ ಬಸವನಗೌಡ ಯತ್ನಾಳ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಈಗ, ಸಿದ್ದರಾಮಯ್ಯನವರ ಆಡಳಿತದಲ್ಲೂ ಸಹ ವಕ್ಫ್ ಕಾನೂನನ್ನು ಹೇರಿ ರೈತರ ಜಾಮೀನು ನಮ್ಮದೆಂದು ಹೇಳುತ್ತಿರುವ ಸರ್ಕಾರದ ನಡೆಯಿಂದ ಬೇಸತ್ತಿರುವ ಅನ್ನದಾತನು ದೀಪಾವಳಿ ಆಚರಿಸೋದಿಲ್ಲ ಎಂದು ಹೇಳಿದ್ದಾರೆ.
ಅನ್ನದಾತನ ಅಳಲು ಸರ್ಕಾರಕ್ಕೆ ಕೇಳುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಅನ್ನದಾತನ ಮೇಲೆ ಏನಾದರೂ ಬಲವಂತದ ಕ್ರಮವೆಸಗಿದರೆ ರಾಜ್ಯಾದ್ಯಂತ ಹೋರಾಟ ಆಗುವುದು ನಿಶ್ಚಿತ. ಅಲ್ಲದೆ, ವಕ್ಫ್ ಮಂಡಳಿ ತನ್ನ ಪೌರುಷವನ್ನು ರೈತರ ಮೇಲೆ ತೋರಿಸಿದ್ದಲ್ಲಿ ರಾಜ್ಯಾದ್ಯಂತ ಇರುವ ವಕ್ಫ್ ಕಚೇರಿಗಳಿಗೆ ಬೀಗ ಹಾಕುವ ಕೆಲಸ ಮಾಡಬೇಕಾಗುತ್ತದೆ.
ನಿಮ್ಮ ತುಷ್ಟೀಕರಣ ರಾಜಕೀಯದ ಪ್ರಯೋಗವನ್ನು ಅನ್ನದಾತನ ಮೇಲೆ ಮಾಡಬೇಡಿ. ಜೈ ಜವಾನ್, ಜೈ ಕಿಸಾನ್, ಜೈ ಸಂವಿಧಾನ್“ ಎಂದು ಯತ್ನಾಳ್ ಎಚ್ಚರಿಸಿದ್ದಾರೆ.