ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವೇಗೌಡರು ಆಂಬ್ಯುಲೆನ್ಸ್‌ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು, ಅವರ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿ ನಿಮಗೆ ಚನ್ನಪಟ್ಟಣದ ಜನತೆ ಉತ್ತರಿಸುತ್ತಾರೆ ಎಂದು ಟ್ವೀಟ್ ಮಾಡಿದೆ.
ರೈತನಾಯಕ, ನೀರಾವರಿಗಳ ಹರಿಕಾರರು, ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ನಾಡಿಗೆ ಕೊಟ್ಟಿರುವ ಕೊಡುಗೆಗಳು ಅಪಾರ. ದೇವೇಗೌಡರು ಹುಟ್ಟು ಹೋರಾಟಗಾರರು ಎಂದು ಜೆಡಿಎಸ್ ಹೇಳಿದೆ.
ಕರ್ನಾಟಕ ಕಾಂಗ್ರೆಸ್ ನ ತಾವು ಮರೆತಿರಬಹುದು, ಹಿಂದೆ ಚನ್ನಪಟ್ಟಣದ ವಿಟ್ಲೇನಹಳ್ಳಿ ಗೋಲಿಬಾರ್‌ನಿಮ್ಮದೇ ಕಾಂಗ್ರೆಸ್‌ಸರ್ಕಾರ ನಡೆಸಿತ್ತು. ಆಗಲೂ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನ ತನಕ ರೈತರಿಗೆ ನ್ಯಾಯ ಕೊಡಿಸಲು ಪಾದಯಾತ್ರೆ ಮಾಡಿದ್ದರು.
ಇಳಿ ವಯಸ್ಸಿನಲ್ಲೂ ರಾಜ್ಯಸಭೆಯಲ್ಲಿ ರಾಜ್ಯದ ಹಲವು ಸಮಸ್ಯೆಗಳ ಕುರಿತು ಮತ್ತು ದೇಶದ ರೈತರ ಬಗ್ಗೆ ಧ್ವನಿ ಎತ್ತಿ ಮಾತನಾಡುವ ಅವರ ಬಗ್ಗೆ ಲಘುವಾಗಿ ಮಾತಾಡಿರುವ ನೀವು, 2 ಬಾರಿ ಸಂಸದರಾಗಿ ಲೋಕಸಭೆಯಲ್ಲಿ ನೀರಾವರಿ, ರೈತರು ಹಾಗೂ ನಾಡಿನ ಸಮಸ್ಯೆಗಳ ಬಗ್ಗೆ ಎಷ್ಟು ಮಾತನಾಡಿದ್ದೀರಿ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆಮಾಡಿಕೊಳ್ಳಿ ಮಿಸ್ಟರ್‌ಸುರೇಶ್. ದೇವೇಗೌಡರು ತಂದಿರುವ ನೀರಾವರಿ ಯೋಜನೆಗಳು, ಜಲಾಶಯಗಳ ನಿರ್ಮಾಣ ಕುರಿತು ಇಡೀ ದೇಶವೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ರಾಜ್ಯದ ನದಿಗಳು – ನೀರಾವರಿ ಹೋರಾಟಗಳ ಬಗ್ಗೆ ಸಂಸತ್ತಿನಲ್ಲಿ ಈಗಲು ಮಾತಾನಾಡುತ್ತಲೇ ಇದ್ದಾರೆ ದೇವೇಗೌಡರು.
ದೇವೇಗೌಡರ ಕುಟುಂಬದ ಬಗ್ಗೆ ಟೀಕಿಸುತ್ತಿರುವ ಕೃತಜ್ಞತೆ ಇಲ್ಲದ ಆ ಮಾಗಡಿ ಶಾಸಕ, ಮೊದಲ ಬಾರಿಗೆ ಜನಪ್ರತಿನಿಧಿಯಾಗಿದ್ದು ಯಾರ ಕೃಪೆಯಿಂದ ಎಂಬುದು ಜನತೆಗೆ ಗೊತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಭಾರತೀಯ ಕಾಂಗ್ರೆಸ್ ನಾಯಕರು, ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ರಾಜ್ಯ ಕಾಂಗ್ರೆಸ್‌ನಾಯಕರಿಗೆ ಮೊದಲು ಕಲಿಸಲಿ ಎಂದು ತಾಕೀತು ಮಾಡಿದೆ.