ಕಾಂಗ್ರೆಸ್ ನಾಯಕರ ಹೇಳಿಕೆಗೆ ಜನರೇ ಉತ್ತರ ಕೊಡ್ತಾರೆ-ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಚನ್ನಪಟ್ಟಣಕ್ಕೆ ಆಂಬ್ಯುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡಲಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಕುಮಾರಸ್ವಾಮಿ ಮಾತನಾಡಿ, ದೇವೇಗೌಡರು ಆಂಬುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡ್ತಾರೆ ಎಂದು ಡಿಕೆ ಸುರೇಶ್ ನೀಡಿರುವ ಹೇಳಿಕೆ‌ಗೆ ಕಾಲವೇ ಉತ್ತರ ನೀಡಲಿದೆ ಎಂದರು. ಮಾಜಿ ಶಾಸಕ ಅಶ್ವತ್ಥ್ ಅವರು ಕೊಟ್ಟಿದ್ದ ಹೇಳಿಕೆಯನ್ನು ಇದೀಗ ಡಿಕೆ ಸುರೇಶ್ ಕೊಡ್ತಾ ಇದ್ದಾರೆ.

ದೇವೇಗೌಡರ ಆರೋಗ್ಯದ ಬಗ್ಗೆ ಡಿಕೆ ಸುರೇಶ್ ಅಷ್ಟೊಂದು ಕೇವಲವಾಗಿ ಮಾತಾಡಿದ್ದಾರೆ. ಇದೇ ಅಶ್ವತ್ಥ್ ಪರವಾಗಿ ಹಳ್ಳಿ ಹಳ್ಳಿಗೆ‌ದೇವೇಗೌಡರು ಪ್ರಚಾರಕ್ಕೆ ಬಂದಿದ್ರು ಅಲ್ವಾ? ಆಗ ವ್ಯಾಮೋಹಕ್ಕೆ‌ದೇವೇಗೌಡರು ಬಂದಿದ್ದರಾ? ಎಂದು ಪ್ರಶ್ನಿಸಿದರು.

ದೇವೇಗೌಡರು ಚನ್ನಪಟ್ಟಣಕ್ಕೆ ಬರುತ್ತಾ ಇರುವುದು ಅವರ ಮೊಮ್ಮಗನ ಪಟ್ಟಾಭಿಷೇಕಕ್ಕಾಗಿ ಹೇಳ್ತೀರಾ ಅಲ್ವಾ? ಅಶ್ವತ್ಥ್ ಗೆಲ್ಲಿಸಬೇಕಾದರೆ ಅವತ್ತು ದೇವೇಗೌಡರು‌ಹೋಗಿರಲಿಲ್ವಾ ಅಲ್ಲಿ? ಅವತ್ತು ಯಾರಿಗೋಸ್ಕರ ಹೋಗಿದ್ರು ದೇವೇಗೌಡರು? ಈ ರೀತಿಯ ಸಣ್ಣತನದ ಮಾತುಗಳು ಇದೆಯಲ್ಲ, ಇದಕ್ಕೆ ಕಾಲವೇ ಉತ್ತರ ನೀಡುತ್ತೆ‌ಎಂದು ಕುಮಾರಸ್ವಾಮಿ ತಿಳಿಸಿದರು.

ಇದೇ ಅಶ್ವತ್ಥ್ ಅವರನ್ನು ಅಭ್ಯರ್ಥಿ ಮಾಡಿ ಸಂಪೂರ್ಣ ಚುನಾವಣಾ ವೆಚ್ಚ ಕುಮಾರಸ್ವಾಮಿ ಮಾಡಿಲ್ಲವೇ? ರಾಮನಗರದಲ್ಲಿ ಕೇವಲ ದೇವೇಗೌಡರ ಕುಟುಂಬದವರು ರಾಜಕಾರಣ ಮಾಡಿದ್ದಾರಾ? ಮಧುಗಿರಿಯಲ್ಲಿ ಅವತ್ತು ಅಭ್ಯರ್ಥಿ ಇಲ್ಲದಕ್ಕೆ ಅನಿತಾ ಕುಮಾರಸ್ವಾಮಿ ನಿಲ್ಲಿಸಿದ್ದೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಇಲ್ಲ ಅಂತ ಕಾರ್ಯಕರ್ತರ ಒತ್ತಡಕ್ಕೆ ಅನಿತಾ ಕುಮಾರಸ್ವಾಮಿ ತಲೆ ಕೊಟ್ಟಿದ್ದೆ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರಲ್ಲದೆ ಒಟ್ಟಾರೆ ಚುನಾವಣೆಯಲ್ಲಿ ನಿನ್ನೆಯಿಂದ ನೋಡ್ತಾ ಇದ್ದೀನಿ. ಯಾರು ಯಾರು ಏನು ಹೇಳಿಕೆ‌ಕೊಡ್ತಾ ಇದ್ದಾರೆ, ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ ಎಂದರು.

ಸಂಸದ ಯದುವೀರ್ ಅವರ ಚನ್ನಪಟ್ಟಣದಲ್ಲಿ ಜಂಟಿ ಕ್ಯಾಂಪೇನ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಯದುವೀರ್ ಅವರಿಗೆ ಚನ್ನಪಟ್ಟಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.

ಅವರಲ್ಲಿ ಮನವಿ ಮಾಡುವ ನಿಟ್ಟಿನಲ್ಲಿ ಸಮಯ ನಿಗದಿ ಮಾಡಿ ಬರ್ತಿದ್ದಾರೆ. ಅವರ ಜೊತೆಯಲ್ಲಿ 8- 10 ಹಳ್ಳಿಗಳಿಗೆ ಭೇಟಿ ಕೊಡ್ತಾ ಇದ್ದೀವಿ. ಮುಂದಿನ ನಾಲ್ಕು ದಿನ ಯಧುವೀರ್ ಅವರು ಬಂದು ಪ್ರಚಾರ ಮಾಡ್ತಾರೆ. ಚನ್ನಪಟ್ಟಣದಲ್ಲಿ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಹೇಳುತ್ತಾರೆ ಇದನ್ನು ಜನ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು.

ಬಿಡದಿಯಲ್ಲಿ ಅಲ್ಪಸಂಖ್ಯಾತ ನಾಯಕರ ಸಭೆ‌ವಿಚಾರವಾಗಿ ಮಾತನಾಡಿ, ಎಲ್ಲಾ ಸಮಾಜವನ್ನು ಜೊತೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅಲ್ಲವೇ? ಆ ನಿಟ್ಟಿನಲ್ಲಿ ನಮ್ಮ ಕೆಲಸ ನಾವು ಮಾಡ್ತಾ ಇದ್ದೀವಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸಮರ್ಥಿಸಿಕೊಂಡರು.

 

- Advertisement -  - Advertisement -  - Advertisement - 
Share This Article
error: Content is protected !!
";