Ad imageAd image

ಕನ್ನಡಿಗರ ಏಕತೆಯ ಪ್ರತಿಬಿಂಬ ದುಬೈ ಕೆಂಪೇಗೌಡ ಉತ್ಸವ- ಆದಿಚುಂಚನಗಿರಿಶ್ರೀ

News Desk

ಚಂದ್ರವಳ್ಳಿ ನ್ಯೂಸ್, ದುಬೈ:
ದುಬೈನಲ್ಲಿ ನಾಡಪ್ರಭು ಕೆಂಪೇಗೌಡರ ಸ್ಮರಣೆಗಾಗಿ ಕನ್ನಡ ಪರಂಪರೆ ಮತ್ತು ಸಂಸ್ಕೃತಿಯನ್ನು ಸ್ಮರಿಸುವ ಉತ್ಸವ ಅದ್ಧೂರಿಯಾಗಿ ನೆರವೇರಿತು.

ದುಬೈನ ಕನ್ನಡ ಒಕ್ಕೂಟಗಳು ಮತ್ತು ದುಬೈ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಕನ್ನಡಿಗರು ಮತ್ತು ಕರ್ನಾಟಕದಿಂದ ಅಥಿತಿಗಳು ಭಾಗವಹಿಸಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ, “ಕನ್ನಡಿಗರ ಏಕತೆಯ ಪ್ರತಿಬಿಂಬ ಈ ಉತ್ಸವ, ಇದು ಕನ್ನಡ ನಾಡು ಮತ್ತು ಭಾವೈಕ್ಯತೆಯನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವಾಗಿದೆ. ಈ ಉತ್ಸವವು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಸ್ಮರಿಸುವ ಮತ್ತು ಪ್ರೇರಣೆ ಮಾಡುವ ಕೆಲಸ ಮಾಡಲಿದೆ ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ಸನ್ಮಾನಿಸಲ್ಪಟ್ಟರು. ರಾಜ್ಯ ಪಶುಸಂಗೋಪನಾ ಸಚಿವ ವೆಂಕಟೇಶ್, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್  ನಾರಾಯಣ್, ಮಾಜಿ ಸಚಿವ ಸಿ.ಟಿ. ರವಿ, ಶಾಸಕ ರವಿಕುಮಾರ್ ಗಣಿಗ, ಚಿತ್ರನಟ ಉಪೇಂದ್ರ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಸಂಘಟಕ ಕಿರಣ್ ಗೌಡ, ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರು, ನಮ್ಮ ಪರಂಪರೆ, ಸಂಸ್ಕೃತಿ ಮತ್ತು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಮುಂದಿನ ತಲೆಮಾರಿಗೂ ಪರಿಚಯಿಸಲು ಈ ಉತ್ಸವವೇ ಆದರ್ಶ ಮಾದರಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಚಿತ್ರನಟ ಉಪೇಂದ್ರ ಈ ಉತ್ಸವದ ಪ್ರಾಮುಖ್ಯತೆ ಒತ್ತಿ ಹೇಳುತ್ತಾ, “ನಮ್ಮ ನಾಡು, ನುಡಿ, ಸಂಸ್ಕೃತಿ ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ ಪ್ರದರ್ಶನಗಳು, ಮತ್ತು ಸಾಮಾಜಿಕ ಸೇವಾ ಸನ್ಮಾನಗಳನ್ನು ನಡೆಸಲಾಯಿತು.

ಪ್ರತಿ ವರುಷ ಈ ಉತ್ಸವವನ್ನು ಕನ್ನಡ ನಾಡಿನ ಸಂಸ್ಕೃತಿಯ ದೀಪವನ್ನು ಮತ್ತಷ್ಟು ವಿಸ್ತಾರವಾಗಿಸಲು ಸಂಘಟಕರು ನಿರ್ಧರಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";