ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡಿಗರೇ ಎಚ್ಚರ..ಎಚ್ಚರ..ಎಚ್ಚರ! ನಿಮ್ಮ ಬಳಿ ಸ್ವಂತ ಮನೆ, ಜಮೀನು, ಸೈಟ್ ಇದೆಯೇ? ಪಕ್ಕದಲ್ಲಿ ದರ್ಗಾ ಇದೆಯೇ? ಈ ಕೂಡಲೇ ನಿಮ್ಮ ಆಸ್ತಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ರಾಜ್ಯದ ರೈತರನ್ನು ಎಚ್ಚರಿಸಿದೆ.
ರಾಜ್ಯದಲ್ಲಿ ಅನ್ನದಾತ ಹತ್ತು ಹನ್ನೊಂದು ಸಮಸ್ಯೆಯಲ್ಲಿ ಸಿಲುಕಿ ಜೀವವನ್ನೇ ಬಿಡುತ್ತಿದ್ದರೆ, ರೈತ ವಿರೋಧಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತೊಂದು ಸಮಸ್ಯೆಯನ್ನು ನೀಡಿ ಅನ್ನದಾತನ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ.
ರೈತರು ಮಳೆ, ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಕಳಪೆ ಬೀಜ, ಬೆಲೆ ಕುಸಿತದಂತಹ ಹತ್ತಾರು ಸಮಸ್ಯೆಗಳಲ್ಲಿ ಸಿಲುಕಿ ನರಳುತ್ತಿದ್ದಾರೆ. ಇದರ ನಡುವೆ ತುಷ್ಟೀಕರಣದ ಜಿದ್ದಿಗೆ ಬಿದ್ದಿರುವ A1 ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ವಕ್ಫ್‌ಬೋರ್ಡ್‌ಅನ್ನು ಎತ್ತಿಕಟ್ಟಿ ಜಮೀನುಗಳನ್ನು ಕಬಳಿಸಲು ಬೆಂಬಲ ನೀಡಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಹೀಗಾಗಿ ರಾಜ್ಯದ ತುಂಬಾ ಆತಂಕಗೊಂಡಿರುವ ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ಪಹಣಿ ಪಡೆಯಲು ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. 14 ಸೈಟುಗಳನ್ನು ವಾಪಸ್‌ಕೊಟ್ಟ ಸೇಡಿಗೆ ಸಿದ್ದರಾಮಯ್ಯನವರು ಈ ರೀತಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ನಾಡಿನ ಜನರಲ್ಲಿ ಮನೆ ಮಾಡಿದೆ ಎಂದು ಬಿಜೆಪಿ ದೂರಿದೆ.