ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜನಕೆರೆ ಗ್ರಾಮದ ವಿಶೇಷಚೇತನರಾದ ಕೀರ್ತನಾ ಹಾಗೂ ಅವರನ್ನು ವಿವಾಹವಾದ ನರಸಿಂಹ ಮೂರ್ತಿ ದಂಪತಿಗಳಿಗೆ ಹೂಡಿಕೆ ಮಾಡಿರುವ ರೂ.50,000 ಪ್ರೋತ್ಸಾಹ ಧನದ ಬಾಂಡ್ ಅನ್ನು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ತಾ.ಪಂ ಇಒ ರವಿಕುಮಾರ್ ವಿತರಿಸಿದರು.
ವಿಶೇಷಚೇತನ ಯುವಕ, ಯುವತಿಯರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾಗುವ ಬಗ್ಗೆ ನಿರ್ಲಕ್ಷತೆ ತೋರಬಾರದು ಹಾಗೆ ಇದರಿಂದ ವಿಶೇಷಚೇತನರು ವೈವಾಹಿಕ ಜೀವನದಿಂದ ವಂಚಿತರಾಗದೆ ಸಾಮಾನ್ಯರಂತೆ ವೈವಾಹಿಕ ಜೀವನ ಸಾಗಿಸಬೇಕು.
ಹಾಗಾಗಿ ವಿಶೇಷಚೇತನ ಯುವಕ–ಯುವತಿಯರನ್ನು ಸಾಮಾನ್ಯ ವ್ಯಕ್ತಿಗಳು ಮದುವೆಯಾಗುವುದಕ್ಕೆ ಪೆÇ್ರೀತ್ಸಾಹ ನೀಡುವುದರಿಂದ ಹೆಚ್ಚು ಹೆಚ್ಚು ಸಾಮಾನ್ಯ ವ್ಯಕ್ತಿಗಳು ವಿಕಲಚೇತನ ವ್ಯಕ್ತಿಗಳನ್ನು ವಿವಾಹವಾಗಲು ಮುಂದೆ ಬಂದು ವಿಕಲಚೇತನರ ವೈವಾಹಿಕ ಜೀವನ ಸುಗುಮವಾಗಿ ನಡೆಸಲು ಅನುಕೂಲವಾಗುತ್ತದೆ ಎಂದು ಸರ್ಕಾರವು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಭಲೀಕರಣ
ಇಲಾಖೆಯ ಮೂಲಕ ವಿವಾಹವಾಗುವ ಸಾಮಾನ್ಯ ಯುವಕ/ಯುವತಿಯರಿಗೆ ನಿರಂತರವಾಗಿ ಮಾಸಿಕ ಒಂದಷ್ಟು ಸಹಾಯ ದೊರಕಿಸಲು ವಿಕಲಚೇತನರ ವ್ಯಕ್ತಿಯ ಹೆಸರಿನಲ್ಲಿ ರೂ.50,000/- ಗಳನ್ನು ಹೂಡಿಕೆಯ ರೂಪದಲ್ಲಿ ಪೆÇ್ರೀತ್ಸಾಹ ನೀಡಲು ಹಾಗೂ ಅದರಿಂದ ಬರುವ ಬಡ್ಡಿ ಹಣವನ್ನು ಭತ್ಯೆಯಾಗಿ ಮದುವೆಯಾದ ಸಾಮಾನ್ಯ ವ್ಯಕ್ತಿ ಪಡೆಯಲು ಅನುವಾಗುವಂತೆ ಯೋಜನೆ ಅನುಷ್ಠಾನಗೊಳಿಸಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ, ತಾ.ಪಂ ವ್ಯವಸ್ಥಾಪಕ ಇರ್ಫಾನ್ ಹಾಗೂ ಎಂಆರ್ಡಬ್ಲ್ಯೂ ಮೈಲಾರಪ್ಪ ಇದ್ದರು.