ಹಗುರವಾಗಿ ಮಾತನಾಡಿದರೆ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇವೆ- ಮಂಜುನಾಥ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡತುಮಕೂರು ವಿಎಎಸ್‌ಎಸ್‌ಎನ್ ಚುನಾವಣೆ ಸಂದರ್ಭದಲ್ಲಿ
ಶಾಸಕರ ವಿರುದ್ದ ಹರೀಶ್ ಗೌಡ ನಾಲಿಗೆ ಹರಿಬಿಟ್ಟಿರುವ ವಿಚಾರಕ್ಕೆ ಸಂಭದಪಟ್ಟಂತೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೊಡ್ಡ ತುಮಕೂರು ಬಿ.ಜೆ.ಪಿ ಮುಖುಂಡ ಟಿ.ಜಿ ಮಂಜುನಾಥ್ ಮಾತನಾಡಿ ಜನಪ್ರಿಯ ಶಾಸಕ ಧೀರಜ್ ಮುನಿರಾಜುರವರ ಬಗ್ಗೆ ಇನ್ನೊಮ್ಮೆ ಕೇವಲವಾಗಿ ಮಾತನಾಡಿದರೆ ನಿಮ್ಮ ಮುಖಕ್ಕೆ ಮಸಿ ಬಳಿಯುತ್ತೇವೆ   ನಿಮಗೆ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕೆನಿಸಿದರೆ ಹೋಗಿಬಿಡಿ. ಸುಖಾ ಸುಮ್ಮನೇ ಹಾಗೇ ಮಾಡ್ತೀನಿ ಹೀಗೆ ಮಾಡ್ತೀನಿ ಮಧುರೆ ಹೋಬಳಿಗೆ ಬನ್ನಿ ಎಂದು ಕರೆಯುವುದು ತಪ್ಪು.

ಮಧುರೆ ಹೋಬಳಿಯಲ್ಲಿ ಬಿಜೆಪಿ ಪಕ್ಷಕ್ಕೆ ತನ್ನದೇ ಆದ ಕಾರ್ಯಕರ್ತರ ಗುಂಪು ಹಾಗೂ ಪಕ್ಷದ ಸಂಘಟನೆ ಸದೃಢವಾಗಿದೆ. ನಿನ್ನೆ ಮೊನ್ನೆ ಬಂದು ಸಂಘಟನೆಯನ್ನು ಉಲ್ಟಾಪಲ್ಟಾ ಮಾಡುತ್ತೀನಿ ಎಂದರೆ ಅದು ಸಾಧ್ಯವೇ ಇಲ್ಲ. ಅವರ ಸ್ವಂತ ಊರಿನಲ್ಲೆ ಇರುವ ಜೆಡಿಎಸ್ ಗ್ರಾ.ಪಂ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ನಿಮಗೆ ಇಲ್ಲ‌.

ಇನ್ನ ನಿಮ್ಮ ಸಂಘಟನೆ ಎಷ್ಟರ ಮಟ್ಟಿಗೆ ಇದೆ ಎಂದು ತಿಳಿದುಕೊಳ್ಳಿ. ಬಾಯಿಯಿಂದ ಹೊಲಸು ಮಾತುಗಳನ್ನು ತೆಗೆದು ಹಾಕಿ ಅದನ್ನು ಶುದ್ದೀಕರಣ ಮಾಡಿಕೊಳ್ಳಿ ನೇರವಾಗಿ ಬಂದು ಶಾಸಕರಲ್ಲಿ ಕ್ಷಮೆ ಕೇಳಿ. ಇನ್ನೊಂದು ಬಾರಿ ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ, ನೀವು ಎಲ್ಲಿ ಹೋದರಲ್ಲಿ ಅಲ್ಲಿಗೆ ಬಂದು ನಾವು ಪ್ರತಿಭಟನೆ ನಡೆಸಿ ನಿಮ್ಮ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇವೆ ಎಂದು ಎಚ್ಚರಿಸಿದರು.

ದೊಡ್ಡ ತುಮಕೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಚುನಾವಣೆ ನಡೆಸುವ ಉದ್ದೇಶದಿಂದ ಕೋರ್ಟ್ ಮೇಟ್ಟಿಲು ಏರಿರುವುದು  ಮೊದಲು ಕಾಂಗ್ರೆಸ್ ನವರು  ಆಮೇಲೆ ನಾವು  ಚುನಾವಣೆಗೆ ಹೋಗಬಾರದೆಂದು  ಕೋರ್ಟ್ ಆದೇಶ ತಂದಿದ್ದಾರೆ.

ನ್ಯಾಯಯುತವಾಗಿ ಚುನಾವಣೆ ನಡೆಸಿ  ವಿಎಸೆಸೆನ್ ಅಭಿವೃದ್ಧಿ ಮಾಡುವ ಉದ್ದಶವಿದ್ದರೇ, ನಿಮಗೆ ನಾವೇ ಗೌರವದಿಂದ ನಡೆದುಕೊಳ್ಳುತ್ತಿದೆವು ಎಂದು ಚುಂಚೇಗೌಡರ ವಿರುದ್ಧ    ಆಕ್ರೋಶ ವ್ಯಕ್ತಪಡಿಸಿದರು. ನಾವು ಅಂದು ಪ್ರತಿಭಟನೆ ಮಾಡಿದ್ದು  ಮತ ಏಣಿಕೆ ನಡೆಸಬೇಕೆಂದು  ಆದರೆ ಅದನ್ನು ಅಪಪ್ರಚಾರ ಮಾಡುತ್ತಿದೀರಿ ನಾವು ತಪ್ಪು  ನಡೆದಿದ್ದರೇ ಕ್ಷಮೆ ಕೇಳುತ್ತಿದ್ದೆವೆ ನಿಮ್ಮಿಂದ ತಪ್ಪು  ನಡೆದಿದ್ದರೆ ಕ್ಷಮೆ ಕೇಳುವುದು ಬೇಡ ಆದರೆ ಇನ್ನು ಮುಂದೆ ಆದರೂ ಬೇರೆ ಸೊಸೈಟಿಗಳಲ್ಲಿ ಈ ಬಾಳು ಬಾಳಬೇಡಿ,

ಸರಕಾರ ಅವರದ್ದು ಇದೇ ಎಂದು ಚುನಾವಣೆ ಪ್ರಕ್ರಿಯೆ ಅವರದ್ದೇ ಆದ ಆಟ ನಡೆಯುತ್ತಿತ್ತು ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೆವು   ಆದ್ದರಿಂದ  ಸ್ಥಳಕ್ಕೆ ಬಂದು ನ್ಯಾಯ ಕೇಳಿದ್ದು  ಇದನ್ನೇ ತಿರುಚಿ ಜನರಿಗೆ  ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.

ಶಾಸಕರು ಚಿಲ್ಲರೇ(ಪುಡಿಗಾಸು) ಕಾಸು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಹರೀಶ್ ಗೌಡ ಹೇಳಿಕೆ ವಿಚಾರ…. ಶಾಸಕರ ಹತ್ತಿರ ಪುಡಿಗಾಸು ಇದೆ. ಅದರಲ್ಲೇ ಸಾಧ್ಯವಾದಷ್ಟು ತಾಲೂಕಿನ ಜನತೆಗೆ ಸೇವೆ ಮಾಡುತ್ತಿದ್ದಾರೆ. ನೀವು ಬಂದ ನೋಟು ಇಟ್ಟಿಕೊಂಡು ಇರುವುವರು ಏನು ಮಾಡಿದ್ದೀರಾ…? ಯಾವ ಸೇವೆ ಮಾಡುತ್ತಿದ್ದೀರಾ…? ಪುಡಿಗಾಸಿನಿಂದ 22 ಪಂಚಾಯಿತಿಗಳಲ್ಲಿ 13 ಪಂಚಾಯಿತಿಗಳು, ನಗರ ಸಭೆಯನ್ನು ಬಿಜೆಪಿ ಪಕ್ಷದ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಬಂದ ನೋಟು ಇಟ್ಟುಕೊಂಡಿರುವ ನೀವು ಏನು ಮಾಡಿದ್ದೀರಾ…? ನಿಮ್ಮ ಊರಲ್ಲೇ ಜೆಡಿಎಸ್ ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಮತ್ತೆ ನೀವು ಯಾಕೆ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಎಂ.ಎಲ್.ಎ ಚುನಾವಣೆಗೆ ಬನ್ನಿ. ಯಾರನ್ನೋ ಮನವೊಲಿಸಲು ಬಕೆಟ್ ರಾಜಕಾರಣ ಬಿಡಿ ಎಂದು ಹರೀಶ್ ಗೌಡರ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ವೇಳೆ ದೊಡ್ಡತುಮಕೂರು ಗ್ರಾಮದ ಮುಖಂಡರಾದ ಪ್ರಕಾಶ್, ಮಂಜುನಾಥ್, ನಾಗರಾಜು, ರಾಜು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";