ನಟ ದರ್ಶನ್ ​ಗೆ ಆರು ವಾರಗಳ ಮಧ್ಯಂತರ ಜಾಮೀನು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರಿ​ಗೆ ಹೈಕೋರ್ಟ್ ಬುಧವಾರ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ದರ್ಶನ್ ಬೆನ್ನು ನೋವಿನ ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಆದೇಶ ಹೊರಡಿಸಿದ್ದಾರೆ.

ಕೊಲೆ ಆರೋಪಿ ನಟ ದರ್ಶನ್‌ಗೆ ಕಳೆದ ಐದು ತಿಂಗಳಿನಿಂದ ಜೈಲುವಾಸದಲ್ಲಿದ್ದು ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಆರ್.ಆರ್.ನಗರದಲ್ಲಿರುವ ಅವರ ನಿವಾಸವನ್ನು ಶುಚಿಗೊಳಿಸಲಾಗಿದೆ. ಮನೆ ಕಳೆದ ಐದು ತಿಂಗಳಿನಿಂದ ಬಿಕೋ ಎನ್ನುತ್ತಿತ್ತು.

ಇದೀಗ ನಟನ​ ಆಗಮನದ ಹಿನ್ನೆಲೆಯಲ್ಲಿ ನಿವಾಸ ಮತ್ತು ವಾಹನಗಳನ್ನು ಕೆಲಸಗಾರರು ಶುಚಿಗೊಳಿಸುತ್ತಿದ್ದಾರೆ. ದರ್ಶನ್ ಅವರ ಫೇವರೆಟ್​ ಸ್ಫೋರ್ಟ್ಸ್‌ಕಾರನ್ನು ಮನೆ ಕೆಲಸಗಾರರು ಸ್ವಚ್ಛ ಮಾಡುತ್ತಿದ್ದುದು ಕಂಡುಬಂತು.

ದರ್ಶನ್ ಅವರಿಗೆ ಬೆನ್ನು ನೋವಿರುವ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಸುದ್ದಿ ಕೇಳಿದ ಕನ್ನಡ ಚಿತ್ರರಂಗದ ಅವರ ಸ್ನೇಹಿತರು ಖುಷಿ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ನಂದ ಕಿಶೋರ್ ಮಾತನಾಡಿ, ದರ್ಶನ್‌ಅವರಿಗೆ ಜಾಮೀನು ಸಿಕ್ಕಿರುವುದು ಕನ್ನಡ ಚಿತ್ರರಂಗಕ್ಕೆ ಸಂಭ್ರಮದ ವಾತಾವರಣ ತಂದುಕೊಟ್ಟಿದೆ. ಅವರ ಕುಟುಂಬಕ್ಕೂ ದೇವರು ಒಳ್ಳೆದು ಮಾಡಲಿ. ನಾನೀಗ ದೇವಸ್ಥಾನದಲ್ಲಿದ್ದೀನಿ. ಈ ಹೊತ್ತಲ್ಲೇ ನನಗೆ ವಿಷಯ ತಿಳಿಯಿತು. ಶುಭ ಸೂಚನೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";