69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ನಾಡು ನುಡಿ, ಭಾಷೆಗೆ ದುಡಿದಂತಹ ಸಾಧಕರನ್ನು ರಾಜ್ಯ ಸರ್ಕಾರ ಗುರುತಿಸಿ ಬುಧವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ
 ಬಿಡುಗಡೆ ಮಾಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಣೆ ಮಾಡಿದರು.

ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 69 ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ವಿವಿಧ ಸಾಧನೆ ಮಾಡಿದ 50 ಪುರಷರ ಹಾಗೂ 59 ಜನ ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ಸಹ ಘೋಷಣೆ ಮಾಡಲಾಗಿದೆ.

ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ -50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಗಳನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಗಿದೆ. ಇದರಿಂದ ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಸುವರ್ಣ ಸಂಭ್ರಮ ಪ್ರಶಸ್ತಿಯ ಮೊತ್ತ 50,000 ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಜಾನಪದ ಕ್ಷೇತ್ರ-
ಇಮಾಮಸಾಬ ಎಂ. ವಲ್ಲೆಪನವರ, ಅಶ್ವ ರಾಮಣ್ಣ, ಕುಮಾರಯ್ಯ, ವೀರಭದ್ರಯ್ಯ, ನರಸಿಂಹಲು (ಅಂಧ ಕಲಾವಿದ), ಬಸವರಾಜ ಸಂಗಪ್ಪ ಹಾರಿವಾಳ, ಎಸ್.ಜಿ. ಲಕ್ಷ್ಮೀದೇವಮ್ಮ, ಪಿಚ್ಚಳ್ಳಿ ಶ್ರೀನಿವಾಸ, ಲೋಕಯ್ಯ ಶೇರ (ಭೂತಾರಾಧನೆ).
ಚಲನಚಿತ್ರ-ಕಿರುತೆರೆ ಹೇಮಾ ಚೌಧರಿ, ಎಂಎಸ್ ನರಸಿಂಹಮೂರ್ತಿ. ಸಂಗೀತ ಕ್ಷೇತ್ರ-ಪಿ ರಾಜಗೋಪಾಲ, ಎಎನ್​ ಸದಾಶಿವಪ್ಪ. ನೃತ್ಯ: ವಿದುಷಿ ಲಲಿತಾ ರಾವ್.
ಆಡಳಿತ ಕ್ಷೇತ್ರ: ಎಸ್​ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ), ವೈದ್ಯಕೀಯ ಕ್ಷೇತ್ರ: ಡಾ ಜೆಬಿ ಬಿಡನಹಾಳ
ಡಾ ಮೈಸೂರು ಸತ್ಯಾನಾರಾಯಣ. ಡಾ.ಲಕ್ಷ್ಮಣ ಹನುಮಂತಪ್ಪ ಬಿದರಿ.

ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್. ಸಂಕೀರ್ಣ ಕ್ಷೇತ್ರ: ಹುಲಿಕಲ್ ನಟರಾಜ್, ಹೆಚ್.​ಆರ್​ ಸ್ವಾಮಿ, ಪ್ರಹ್ಲಾದ ರಾವ್, ಕೆ ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್, ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು.

ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ್ ನಾಯಕ್. ಪರಿಸರ: ಆಲ್ಮಿತ್ರಾ ಪಟೇಲ್. ಕೃಷಿ: ಶಿವನಾಪುರ ರಮೇಶ, ಪುಟ್ಟೀರಮ್ಮ. ಮಾಧ್ಯಮ: ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ. ಶಿಲ್ಪಕಲೆ ಕ್ಷೇತ್ರ: ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ). ವಿಜ್ಞಾನ-ತಂತ್ರಜ್ಞಾನ: ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್. ಸಹಕಾರ: ವಿರೂಪಾಕ್ಷಪ್ಪ ನೇಕಾರ.

ಬಯಲಾಟ: ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ), ನಾರಾಯಣಪ್ಪ ಶಿಳ್ಳೇಕ್ಯಾತ. ಯಕ್ಷಗಾನ : ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ. ರಂಗಭೂಮಿ: ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ., ಭಾಗ್ಯಶ್ರೀ ರವಿ, ಡಿ. ರಾಮು, ಜನಾರ್ಧನ್ ಹೆಚ್‌., ಹನುಮಾನದಾಸ ವ. ಪವಾರ.

ಸಾಹಿತ್ಯ: ಬಿ.ಟಿ. ಲಿಲಿತಾ ನಾಯಕ್ , ಅಲ್ಲಮಪ್ರಭು ಬೆಟ್ಟದೂರು. ಡಾ. ಎಂ. ವೀರಪ್ಪ ಮೊಯಿಲಿ. ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲ ರಾಮೇಗೌಡ. ಡಾ. ಪ್ರಶಾಂತ್ ಮಾಡ್ತಾ ಶಿಕ್ಷಣ: ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್. ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಗೌತಮ್ ವರ್ಮ, ಆರ್‌. ಉಮಾದೇವಿ. ನ್ಯಾಯಾಂಗ: ಬಾಲನ್. ಚಿತ್ರಕಲೆ: ಪ್ರಭು ಹರಸೂರು. ಕರಕುಶಲ: ಚಂದ್ರಶೇಖರ ಸಿರಿವಂತೆ.

 

- Advertisement -  - Advertisement - 
Share This Article
error: Content is protected !!
";