ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರ್ ಟಿಐ ಕಾರ್ಯಕರ್ತರು ಇನ್ನಿಲ್ಲದಂತೆ ಕಾಡುತ್ತಿದ್ದು ಈಗ ಮಾನನಷ್ಟ ಮೊಕದ್ದಮೆಯನ್ನು ಆರ್ ಟಿಐ ಕಾರ್ಯಕರ್ತ ಅಬ್ರಾಹಂ ದಾಖಲಿಸಿದ್ದಾರೆ.

ಅಡ್ವೊಕೇಟ್- ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಅವರು, ತಮ್ಮನ್ನು ಬೆದರಿಕೆ ಹಾಕುವವನು (ಬ್ಲ್ಯಾಕ್ ಮೇಲರ್) ಎಂದು ಕರೆದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದ ಅರ್ಜಿದಾರರ ಪೈಕಿ ಟಿಜೆ ಅಬ್ರಾಹಂ ಸಹ ಒಬ್ಬರಾಗಿದ್ದಾರೆ ಎನ್ನುವುದು ವಿಶೇಷ.

ಪಿಟಿಐಗೆ ಹೇಳಿಕೆ ನೀಡಿರುವ ಅಬ್ರಹಾಂ ಅವರು, ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಸಿದ್ದರಾಮಯ್ಯ ಕೆಲವು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನನ್ನನ್ನು ಬ್ಲ್ಯಾಕ್‌ ಮೇಲರ್ ಮತ್ತು ಕೆಟ್ಟ ಪೂರ್ವಾಪರ ಹೊಂದಿರುವ ವ್ಯಕ್ತಿ ಎಂದು ಕರೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ಅವರು ನಕಲಿ ಮತ್ತು ಅಕ್ರಮ ಹಕ್ಕು ಸೃಷ್ಟಿಸಿ 14 ಸೈಟ್‌ಗಳನ್ನು ತೆಗೆದುಕೊಂಡಿದ್ದೀರಿ ಮತ್ತು ನೀವು ನನ್ನನ್ನು ಬ್ಲ್ಯಾಕ್‌ಮೇಲರ್ ಎಂದು ಕರೆಯುತ್ತೀರಿ! ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನೀವು ಹೇಗೆ ತಪ್ಪಿಸಿಕೊಳ್ಳುತ್ತೀರಿ ಎಂದು ನಾವು ನೋಡುತ್ತೇವೆ ಎಂದು ಅಬ್ರಾಹಂ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಪತ್ನಿಗೆ ಮೈಸೂರಿನ ಮೇಲ್ಮಟ್ಟದ ಪ್ರದೇಶದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿರುವ ಭೂಮಿಗಿಂತ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿರುವ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

- Advertisement -  - Advertisement -  - Advertisement - 
Share This Article
error: Content is protected !!
";