ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್ ಬೋರ್ಡ್ ಮೂಲಕ ಲ್ಯಾಂಡ್ ಜಿಹಾದ್‌ಗೆ ಇಳಿದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಅನ್ನದಾತರ ಅಸ್ತಿತ್ವಕ್ಕೆ ಕೊಡಲಿ ಏಟು ಹಾಕಿ, ಕಣ್ಣೀರು ಹಾಕಿಸಿದೆ ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ಟೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದೆ.
ಸಿದ್ದರಾಮಯ್ಯನವರೇ, ತಮ್ಮ ಸರ್ಕಾರದ ವಿರುದ್ಧ ರೈತರು ದಂಗೆ ಏಳುವ ಮುನ್ನ ಕೊಟ್ಟ ನೋಟಿಸ್ ವಾಪಸ್ ಪಡೆಯಿರಿ, ಅನ್ನದಾತರ ಸ್ವಾಭಿಮಾನ ಕೆಣಕದಿರಿ ಎಂದು ಬಿಜೆಪಿ ಎಚ್ಚರಿಸಿದೆ.
ಲೂಟಿಕೋರ ಕಾಂಗ್ರೆಸ್ ಸರ್ಕಾರ-
ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದಾಳಿಕೋರ ಮನಸ್ಥಿತಿ ಬಟಾ ಬಯಲಾಗಿದೆ. ಅನ್ನದಾತರ ಅಸ್ತಿತ್ವಕ್ಕೆ ಕೊಳ್ಳಿಯಿಟ್ಟಿರುವ ಸಚಿವ ಜಮೀರ್ ಅಹಮ್ಮದ್ ಅವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆಂದು ವಿಜಯಪುರ ಜಿಲ್ಲಾಧಿಕಾರಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ನ ಮುಖವಾಡ ಬಯಲಾಗಿದೆ ಎಂದು ಬಿಜೆಪಿ ಹರಿಹಾಯ್ದಿದೆ.
ಭಷ್ಟ ಸಿದ್ದರಾಮಯ್ಯನವರೇ, ಜಮೀನು ವಶಪಡಿಸಿಕೊಳ್ಳುವುದಕ್ಕೆ ಆದೇಶಿಸಿ, ರೈತರನ್ನು ಅಂಧಕಾರಕ್ಕೆ ತಳ್ಳಿರುವ ಜಮೀರ್ ಅಹಮದ್ ಖಾನ್‌ರ ರಾಜೀನಾಮೆ ತಕ್ಷಣ ಪಡೆಯಿರಿ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸುಮಾರು 45ಕ್ಕೂ ಹೆಚ್ಚು ರೈತರಿಗೆ ವಕ್ಫ್‌ಬೋರ್ಡ್‌ನೋಟಿಸ್‌ನೀಡಿದೆ.
ರೈತರ ಜಮೀನನ್ನು ಕರ್ನಾಟಕ ವಕ್ಫ್‌ಬೋರ್ಡ್‌ಗೆ ವರ್ಗಾವಣೆ ಮಾಡುವ ಕೆಲಸವನ್ನು ವಿಜಯಪುರ ಜಿಲ್ಲೆಯಿಂದ ಆರಂಭಿಸಿ ಇದೀಗ ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ನಾಡಿನ ರೈತರು ಸುಮ್ಮನೆ ಇದ್ದಷ್ಟೂ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಇಡೀ ರಾಜ್ಯವನ್ನೇ ವಕ್ಫ್‌ಬೋರ್ಡ್‌ಗೆ ಬರೆದು ಕೊಟ್ಟರೂ ಅಚ್ಚರಿ ಪಡಬೇಕಿಲ್ಲ!
ಬಿಜೆಪಿಯ ರೈತಪರ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ತಿಳಿಸಿದೆ. ರೈತರ ಭೂಮಿಯನ್ನು ವಕ್ಫ್‌ಬೋರ್ಡ್‌ಗೆ ವರ್ಗಾವಣೆ ಮಾಡಿದ್ದ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.
ರಾಜ್ಯದ ಎಲ್ಲಾ ರೈತರ ಜಮೀನುಗಳು, ಸರ್ಕಾರಿ ಆಸ್ತಿಗಳು, ಮಠಗಳು, ದೇವಸ್ಥಾನಗಳ ಆಸ್ತಿಯನ್ನು ವಕ್ಫ್‌ಬೋರ್ಡ್‌ಕೈ ಬಿಡುವವರೆಗೂ ಬಿಜೆಪಿ ನಿರಂತರ ಹೋರಾಟ ನಡೆಸುವುದು ಶತಸಿದ್ಧ! ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆದೇಶದ ಮೇರೆಗೆ ರೈತರಿಗೆ ನೋಟಿಸ್‌ಕೊಟ್ಟಿದ್ದಾಗಿ ವಿಜಯಪುರ ಜಿಲ್ಲಾಧಿಕಾರಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ತುಷ್ಟೀಕರಣದ ಪಿತಾಮಹ ಸಿದ್ದರಾಮಯ್ಯ ಅವರ ಪಟ್ಟದ ಶಿಷ್ಯ ಸಚಿವ ಜಮೀರ್ ಅಹಮದ್ ಖಾನ್ ಅವರ ಅಣತೆಯಂತೆಯೇ ರೈತರಿಗೆ ನೋಟಿಸ್‌ನೀಡಿ ವಕ್ಫ್‌ಆಸ್ತಿ ಎಂದು ಘೋಷಣೆ ಮಾಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕಾಂಗ್ರೆಸ್‌ಸರ್ಕಾರ ತಪ್ಪು ಮಾಡಿ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ತೇಪೆ ಹಚ್ಚುವ ಬದಲು ಸಚಿವ ಜಮೀರ್‌ಅವರ ರಾಜೀನಾಮೆ ಪಡೆದು ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕಿದೆ ಎಂದು ಬಿಜೆಪಿ ಆಗ್ರಹ ಮಾಡಿದೆ.