ಸಿಎಸ್ಆರ್ ನಿಧಿಯಡಿ ಕ್ರೀಡಾಂಗಣ ಅಭಿವೃದ್ಧಿ-ಜಿಲ್ಲಾಧಿಕಾರಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ತರುವಾಯ ಬಳೆಕದಾರಿಗೆ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಶುಲ್ಕ ನಿಗದಿಪಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿದೆ, ಬಳಕೆದಾರರಿಂದ ಶುಲ್ಕ ವಸೂಲಿ ಮಾಡುವುದು ಸರಿಯಾದ ಕ್ರಮವಲ್ಲ. ಸದ್ಯ ಸುಸ್ಥಿತಿಯಲ್ಲಿ ಇರುವ ಷಟಲ್ ಬ್ಯಾಡ್ಮಿಂಟನ್, ಜಿಮ್ ಹಾಗೂ ಈಜುಕೊಳಕ್ಕೆ ಮಾತ್ರ ಶುಲ್ಕ ಸಂಗ್ರಹಿಸಬೇಕು. ಇದರ ಜೊತೆಗೆ ಕ್ರೀಡಾಂಗಣದಲ್ಲಿ ಆಯೋಜಿಸುವ ಕ್ರೀಡಾಕೂಟ ಹಾಗೂ ಶಿಬಿರಗಳಿಗೂ ಸಹ ನಿಯಮಾನುಸಾರ ಶುಲ್ಕ ವಿಧಿಸಬೇಕು.

ಶಿಬಿರಗಳಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳ ಸಂಖ್ಯೆ, ಅವರು ಬಳಸುವ ಸೌಕರ್ಯಗಳನ್ನು ಗಣನೆಗೆ ತೆಗೆದುಕೊಂಡು ಶುಲ್ಕ ನಿಗಧಿಪಡಿಸಬೇಕು. ಹಿಂದೆ ಜಿಲ್ಲಾ ಕ್ರೀಡಾಂಗಣ ನಗರದ ಸಾರ್ವಜನಿಕರಿಗೆ ಆಕರ್ಷಣೀಯ ಸ್ಥಳವಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಕ್ರೀಡಾಂಗಣಕ್ಕೆ ಕೆಟ್ಟ ಹೆಸರು ಬಂದಿದೆ.

ಬಳಕೆದಾರರ ಸಂಘ ಸಂಸ್ಥೆಗಳ ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಕ್ರೀಡಾಂಗಣದ ನಿರ್ವಹಣೆ ಕಾರ್ಯಕೈಗೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಂ.ನೆಲವಗಿ ಅವರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.


ಸಿ.ಎಸ್.ಆರ್. ನಿಧಿಯಡಿ ಕ್ರೀಡಾಂಗಣ ಅಭಿವೃದ್ಧಿ
ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣ ಅಭಿವೃದ್ಧಿಗೆ ಈಗಾಗಲೇ ಕೆ.ಎಂ..ಆರ್.ಸಿ ಅಡಿ ರೂ.50 ಕೋಟಿಗೆ ಕ್ರಿಯಾಯೋಜನೆಗೆ ರೂಪಿಸಿ ಅನುಮೋದನೆ ಕಳುಹಿಸಲಾಗಿದೆ ಎಂದು ಸಹಾಯಕ ನಿರ್ದೇಶಕಿ ಎಸ್.ಎಂ.ನೆಲವಗಿ ಸಭೆಯಲ್ಲಿ ತಿಳಿಸಿದರು.

ಕೆ.ಎಂ..ಆರ್.ಸಿ ಅಡಿ ಕ್ರೀಡಾಂಗಣ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡುವುದು ಸಂಶಯ. ಸಿಂಥಟಿಕ್ ಟ್ರಾಕ್ ಹಾಗೂ ಇತರೆ ಕ್ರೀಡಾ ಸಮುಚ್ಚಯಗಳ ನಿರ್ಮಾಣಕ್ಕೆ ಮರು ಕ್ರೀಯಾ ಯೋಜನೆ ರೂಪಿಸಿ ಅನುಮೋದನೆ ಸಲ್ಲಿಸಿ. ಇದರ ಹೊರತಾಗಿ ಜಿಲ್ಲೆಯ ಕಂಪನಿಗಳ ಸಿ.ಎಸ್.ಆರ್ ನಿಧಿಯಡಿ ಕ್ರೀಡಾಂಗಣ ಅಭಿವೃದ್ಧಿ ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಸಭೆಯಲ್ಲಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ವಾಲಿಬಾಲ್ ತರಬೇತುದಾರ ಮಹಮದ್ ಮುಹಿಬುಲ್ಲಾ ಸೇರಿದಂತೆ ಕ್ರೀಡಾ ಬಳಕೆದಾರರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";