ಕನ್ನಡ ಭಾಷೆ ನಮ್ಮ ಅಂತರಂಗದ ನುಡಿ-ಎಂ.ನಾಸಿರುದ್ದೀನ್
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡವೆಂದರೆ ಬರೀ ಭಾಷೆಯಲ್ಲ. ಅದು ನಮ್ಮ ಅಂತರಂಗದ ನುಡಿಯಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ನಮ್ಮ ಸ್ವಾಭಿಮಾನದ ಸಂಕೇತ. ೧೯೫೬ ರಲ್ಲಿ ಕನ್ನಡ ಭಾಷೆ ಮಾತನಾಢುವವರೆಲ್ಲರನ್ನೂ ಒಗ್ಗೂಡಿಸಿ ಮೈಸೂರು ಪ್ರಾಂತ್ಯ ರಚನೆಯಾಯಿತು. ಕರ್ನಾಟಕ ಏಕೀಕರಣಕ್ಕೆ ಆಲೂರು ವೆಂಕಟರಾವ್ ಮುನ್ನಡಿ ಬರೆದರು.
ಕನ್ನಡ ನಾಡಿಗೆ ಕವಿಗಳ ಕೊಡುಗೆ ಅಪಾರವಾಗಿದ್ದು ಕನ್ನಡ ಭಾಷೆಯಲ್ಲಿ ಮಾನವನ ಬದುಕಿಗೆ ಅವಶ್ಯವಿರುವ ಜೀವನ ಮೌಲ್ಯಗಳಿವೆ. ನಾವು ಬೇರೆ ಭಾಷೆಗಳನ್ನು ಕಲಿಯುವುದರ ಜತೆಗೆ ನಮ್ಮ ಹೃದಯದ ಭಾಷೆಯಾಗಿರುವ ಕನ್ನಡವನ್ನು ಬಳಸುವುದರ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳೆಸಬೇಕು. ಎಂದರು.
ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಹಿರಿಯ ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ಎಸ್.ಸಿ.ಪ್ರಸಾದ್, ಗಿರಿಜಾ, ತಿಪ್ಪೇಸ್ವಾಮಿ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಯು.ಸಿದ್ದೇಶಿ, ನಿತ್ಯಾನಂದ, ಕನಕಮ್ಮ, ಲೀಲಾವತಿ, ಅರ್ಜುಮಂದ್ ಬಾನು, ಪದ್ಮ, ಶಿವಲೀಲಾ, ರೇವಣ್ಣ, ತಾಂತ್ರಿಕ ಸಹಾಯಕ ಅವಿನಾಶ್,
ಕಚೇರಿ ಅಧೀಕ್ಷಕರಾದ ದೇವೇಂದ್ರಪ್ಪ, ಸಹಾಯಕ ಸಾಂಖ್ಯಿಕ ಅಧಿಕಾರಿ ರೂಪಾ, ನಿರ್ವಾಹಕರಾದ ಮಂಜುನಾಥ್, ಶಿವಣ್ಣ, ಕ್ಷೀರಾ, ಚಂದ್ರಶೇಖರ್, ವಿನಯ್ ಡಿ.ದರ್ಜೆ ನೌಕರರಾದ ನಿರ್ಮಲ, ಬೋಸಯ್ಯ, ಯುವರಾಜ್ ಇದ್ದರು.