ವಖ್ಫ್ ಆಸ್ತಿ ಹೆಸರಲ್ಲಿ ಹಿಂದುಗಳನ್ನು ಸಿದ್ದರಾಮಯ್ಯ ಒಕ್ಕಲೆಬ್ಬಿಸುತ್ತಿದ್ದಾರೆ- ರಾಮಕೃಷ್ಣಯ್ಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರ ನಾಡಿನ ರೈತರ, ಮಠ ಮಾನ್ಯಗಳ ಅಸ್ತಿಗಳನ್ನು ವಖ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸಲು ಹೊರಟಿದೆ. ಜೊತೆಗೆ ನೂರಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದ ರೈತರ ಭೂಮಿಗಳು ಈಗ ವಖ್ಫ್ ಬೋರ್ಡ್ಗೆ ಸೇರಿದ ಅಸ್ತಿಗಳಾಗಿ ಪರಿವರ್ತತವಾಗುತ್ತಿವೆ.

ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಾಮಕೃಷ್ಣಪ್ಪ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಾವು ಮುಸ್ಲಿಂ ಬಾಂಧವರಿಂದ ಅಧಿಕಾರಕ್ಕೆ ಬಂದಿದ್ದೇವೆ. ಹಾಗಾಗಿ ರಾಜ್ಯದ ಅಸ್ತಿಯನ್ನು ಮುಸ್ಲಿಮರಿಗೆ ಸಮವಾಗಿ ಹಂಚುತ್ತೇವೆ ಎಂದು ಹೇಳಿದ್ದರು.

ಈಗ ಸಚಿವ ಜಮೀರ್ ಅಹ್ಮದ್ ಮೂಲಕ ರಾಜ್ಯದಧ್ಯಂತ ಇರುವ ಸರ್ಕಾರಿ ಜಾಗ ಹಾಗೂ ಅಮಾಯಕ ಹಿಂದೂಗಳ ಅಸ್ತಿಯನ್ನು ನಂಬರ್ ಹನ್ನೊಂದರ ಅಡಿಯಲ್ಲಿ ಪರಿವರ್ತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೊದಲು ಎರಡು ಲಕ್ಷ ಎಕರೆಯಷ್ಟಿದ್ದ ವಖ್ಫ್ ಬೋರ್ಡ್ ಆಸ್ತಿ ಈಗ ಒಂಬತ್ತು ಲಕ್ಷ ಎಕರೆಯಷ್ಟಾಗಿದೆ ಎಂದರೆ ಹಿಂದೂಗಳ ಅಸ್ತಿಯನ್ನು ಎಷ್ಟು ಹೊಡೆದಿದ್ದಾರೆ ಎಂದು ಗೊತ್ತಾಗುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಕೂಡಾ ಹಿಂದೂಗಳ ಅಸ್ತಿಯನ್ನು ವಖ್ಫ್ ಅಸ್ತಿಯನ್ನಾಗಿ ಪರಿವರ್ತಿಸಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ. ಇಷ್ಟು ವರ್ಷ ಇಲ್ಲದ ವಖ್ಫ್ ಅಸ್ತಿಗಳು ಈಗ ಏಕಾ ಏಕಿ ಹೇಗೆ ಉದ್ಭವವಾಗಿವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಉತ್ತರಿಸಬೇಕು.

ಇದರಲ್ಲಿ ಸಚಿವ ಜಮೀರ್ ಪಾತ್ರ ಸಾಕಷ್ಟಿದೆ. ಹಿಂದೂ ಮುಸ್ಲಿಮರ ನಡುವೆ ವಿಷ ಬೀಜ ಬಿತ್ತಿ ರಾಜ್ಯದ ಪ್ರಜೆಗಳ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಜಮೀರ್ ನನ್ನು ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಜೊತೆಗೆ ವಖ್ಫ್ ಸಮಿತಿಯನ್ನು ವಜಾ ಮಾಡಬೇಕು.

ಜೊತೆಗೆ ಈಗಾಗಲೇ ರಾಜ್ಯದ ರೈತರಿಗೆ ಅಮಾಯಕರಿಗೆ ನೀಡಿರುವ ನೋಟೀಸನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಉಗ್ರ ಹೋರಾಟಕ್ಕೆ ಅಣಿಯಾಗುತ್ತಿದೆ. ಹಿಂದುಗಳನ್ನು ಒಕ್ಕಲೆಬ್ಬಿಸುವ ಕಾಂಗ್ರೆಸ್ ಸರ್ಕಾರದ ನೀತಿಗೆ ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ರಾಮಕೃಷ್ಣಯ್ಯ ಹೇಳಿದರು.

           ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗೋಪಿ ಮಾತನಾಡಿ ಮುಸ್ಲಿಮರನ್ನು ಓಲೈಸುವ ನೆಪದಲ್ಲಿ ಹಿಂದೂಗಳ ಅಸ್ತಿಗಳನ್ನು ಕಬಳಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಚಿವ ಜಮೀರ್ ರಾಜ್ಯದಲ್ಲಿ ವಖ್ಫ್ ಆಸ್ತಿ ಹೆಸರಲ್ಲಿ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ. ಇದನ್ನು ಬಿಜೆಪಿ ಸಹಿಸುವುದಿಲ್ಲ.

ಹಿಂದೆ ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳ ತಪ್ಪಿನಿಂದ ನೋಟಿಸ್ ನೀಡಲಾಗಿತ್ತು.ಕೂಡಲೇ ಸರ್ಕಾರ ಎಚ್ಛೆತ್ತು ನೋಟಿಸ್ ವಾಪಾಸ್ ಪಡೆಯಲಾಯ್ತು. ನಮ್ಮದು ಜಾತ್ಯತೀತ ತತ್ವ ಎಂದು ಹೇಳುವ ಸಿದ್ದರಾಮಯ್ಯ ಬರೀ ಮುಸ್ಲಿಮರನ್ನು ತುಸ್ಟಿಕರಿಸುವುದೇ ಜಾತ್ಯತೀತ ತತ್ವವಾ ಎಂದು ಪ್ರಶ್ನಿಸಿದ ಗೋಪಿ ಈಗಾಗಲೇ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ದು ಜನವಿರೋಧಿ ಸರ್ಕಾರ ಎನಿಸಿಕೊಂಡಿದ್ದರೆ,

ಈಗ ವಖ್ಫ್ ಆಸ್ತಿ ಹೆಸರಿನಲ್ಲಿ ಹಿಂದುಗಳನ್ನು ಒಕ್ಕಲಎಬ್ಬಿಸುವ ಸಿದ್ದರಾಮಯ್ಯ ಸರ್ಕಾರದ ನೀತಿಯನ್ನು ಬಿಜೆಪಿ ಖಂಡಿಸಿ ಹಿಂದುಗಳಿಗೆ ಹಾಗೂ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಿಜೆಪಿ ಹೋರಾಟ ಮಾಡಿ ಇದಕ್ಕೆ ಕಾರಣನಾದ ಜಮೀರ ನನ್ನು ಸಂಪುಟದಿಂದ ವಜಾ ಮಾಡುವ ಮೂಲಕ ಹೋರಾಟ ಮುಂದುವರೆಯಲಿದೆ. ಮುಖ್ಯ ಅಂಶವೆಂದರೆ ವಖ್ಫ್ ಅಕ್ರಮಿಸಿಕೊಂಡ ಭೂಮಿಯನ್ನು ಪ್ರಶ್ನಿಸಲು ಕೋರ್ಟುಗೆ ಹೋಗುವಂತಿಲ್ಲ.

ವಖ್ಫ್ ಬೋರ್ಡ್ಗೆ ಹೋಗಬೇಕು. ಅಲ್ಲಿ ಹೋದರೆ ಅಲ್ಲಿರುವ ಎಲ್ಲರೂ ಮುಸ್ಲಿಮರೇ ಹಾಗಾಗಿ ಅಲ್ಲಿ ಹಿಂದುಗಳಿಗೆ, ರೈತರಿಗೆ ನ್ಯಾಯ ಸಿಗುವುದಿಲ್ಲ. ಇದನ್ನು ಮನಗಂಡು ಎಲ್ಲಾ ಹಿಂದೂಗಳು, ರೈತರು ಬಿಜೆಪಿ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಗೋಪಿ ಹೇಳಿದರು.

         ಸುದ್ಫಿಗೊಷ್ಟಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ. ನಾಗೇಶ್,ಪಕ್ಷದ ಮುಖಂಡರಾದ ಉಮಾ ಮಹೇಶ್ವರಿ, ಟಿ. ಜಿ. ಮಂಜುನಾಥ್, ಡಾ. ನಾರಾಯಣ್ ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";