ಜಾನಪದ ಸಂಸ್ಕೃತಿಯ ಮೂಲ ರಂಗಭೂಮಿ-ಕಲಾವಿದ ರುದ್ರೇಶ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಂಗಭೂಮಿ
, ನಟನೆ, ನಾಟಕ  ಹಾಗೂ ಜಾನಪದ ಸಂಸ್ಕೃತಿಯ ಮೂಲವಾಗಿದೆ.ನಾಟಕಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಅಂದಿನಿಂದ ಇಂದಿನವರೆಗೂ  ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ  ರಂಗಭೂಮಿಯ ಉಳಿವಿಗೆ  ಸಾಹಿತಿ ಮತ್ತು ಕಲಾವಿದರ   ಪಾತ್ರ  ಮಹತ್ವಪೂರ್ಣವಾದದ್ದು ಎಂದು ಕಲಾವಿದ ರುದ್ರೇಶ್ ತಿಳಿಸಿದರು 

 ನಗರದ ರವೀಂದ್ರ ಕಲಾಕ್ಷೇತ್ರ ಜಿ ಸಿ ರಸ್ತೆ ಬೆಂಗಳೂರಿನಲ್ಲಿ ನಡೆದು ಪಾಪು ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಗದೊಂದಿಗೆ ಆಯೋಜಿಸಿದ್ದ  ಕರುಕ್ಷೇತ್ರ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ರಂಗಭೂಮಿ, ನಾಟಕಗಳು ಎನ್ನುವಂತದ್ದು ಭಾರತದ ಧಾರ್ಮಿಕತೆ, ಸಂಸ್ಕೃತಿ, ಇತಿಹಾಸಗಳ ಪ್ರತಿಬಿಂಬವಾಗುವ ಜತೆ ಮನೋರಂಜನೆಯ ವೇದಿಕೆ ಆಗಿದ್ದವು.

ಆದರೆ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ರಂಗಭೂಮಿಯ ನಾಟಕಗಳು ಕಣ್ಣಮರೆಯಾಗುತ್ತಿರುವುದು ಬೇಸರದ ಸಂಗತಿ ಯಾಗಿದೆ ಆದರೆ ನಾಡಿನ ಕಲೆ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ಈ ರಂಗಭೂಮಿ ನಾಟಕಗಳು  ಉಳಿಸಿ ಬೆಳೆಸುವ ಕೆಲಸ ಇಂದಿನ ಯುವಕರ ಕರ್ತವವಾಗಿದೆ ಎಂದರು . 

ವಕೀಲ  ರಾಜು ಡಿ ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ  ಕಂಪ್ಯೂಟರ್ ಹಾಗೂ ಮೊಬೈಲ್ ಎಂಬ ಆಧುನಿಕ ಭೂತಗಳು ಪ್ರತಿಯೊಬ್ಬರ ಮನೆ ಮನದಲ್ಲಿ ಲಗ್ಗೆ ಇಟ್ಟು ಮನುಷ್ಯರ ನೆಮ್ಮದಿಯನ್ನು, ಆರೋಗ್ಯ ಹಾಳು ಮಾಡುತ್ತಿರುವ ಇಂದಿನ ದಿನಗಳಲ್ಲಿಯೂ ಈ ರೀತಿಯ  ರಂಗಭೂಮಿ ನಾಟಕಗಳನ್ನು ಹಮ್ಮಿಕೊಳ್ಳುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು 

 ರಂಗಭೂಮಿ ನಾಟಕಗಳು ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಹಿರಿಮೆಯನ್ನ ಪ್ರತಿಬಿಂಬಿಸುವ ಸಾಧನಗಳಾಗಿದ್ದು ಇವುಗಳನ್ನ ಉಳಿಸಿ ಬೆಳೆಸಿ ಪೋಷಿಸುವ ಜವಾಬ್ದಾರಿ ಇಂದಿನ ಯುವಕರದಾಗಿದೆ ನಾಡಿನ ಸಂಸ್ಕೃತಿಯ ಉಳಿವಿಗಾಗಿ ರಂಗಭೂಮಿಯ ನಾಟಕಗಳನ್ನು ಉಳಿಸುವ ಕೆಲಸವಾಗಬೇಕಿದೆ ಎಂದರು

 ಈ ಸಂದರ್ಭದಲ್ಲಿ ರಾಮಚಂದ್ರ, ಶಿವಣ್ಣ ಆರಾದ್ಯ, ನಾಗೇಂದ್ರ, ರಮೇಶ್, ಹಿರಿಯ ಕಲಾವಿದ  ಶ್ರೀನಿವಾಸ್ ಮತ್ತಿದ್ದರು ಉಪಸ್ತಿತರಿದ್ದರು

 

 

- Advertisement -  - Advertisement -  - Advertisement - 
Share This Article
error: Content is protected !!
";