ಚೀಟಿ ಹೆಸರಲ್ಲಿ ಮಹಿಳೆಯಿಂದ ಏಳು ಕೋಟಿ ವಂಚನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಚೀಟಿ ವ್ಯವಹಾರ ನಡೆಸುತ್ತಿದ್ದ ಪುಷ್ಪಕಲಾ ಎಂಬುವವರು
  ಸುಮಾರು 60 ಮಂದಿಗೆ ಸುಮಾರು 7 ಕೋಟಿ ರೂ. ವಂಚಿಸಿ, ಹಣ ಸಮೇತ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ನಗರದ ಮುಕ್ತಾಂಭಿಕ ಬಡಾವಣೆಯ ನಿವಾಸಿ ಈ ಪುಷ್ಪಕಲಾ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಕಳೆದ ನಾಲ್ದೈದು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು.

 ಕಳೆದ ನಾಲ್ಕು ವರ್ಷದಿಂದ ಕಟ್ಟುನಿಟ್ಟಾಗಿ ಚೀಟಿ ವ್ಯವಹಾರ ನಡೆಸುವ ಮೂಲಕ ಸುತ್ತಮುತ್ತಲಿನ ಜನರು ನಂಬಿಕೆ ಗಳಿಸಿದ್ದರು. ಮಗಳ ಮದುವೆಗಾಗಿ, ಮನೆ ಕಟ್ಟಲು, ಬ್ಯುಸಿನೆಸ್ ಮಾಡುವ ಕಾರಣಕ್ಕೆಂದು ಸುಮಾರು 250ಕ್ಕೂ ಹೆಚ್ಚು ಜನರು ಪುಷ್ಪಕಲಾ ಬಳಿ ಚೀಟಿ ಹಾಕಿದ್ರು. 

ಆಕ್ಟೋಬರ್  27. ರಂದು ಗಂಡ ರುದ್ರಆರಾಧ್ಯ ಜಮೀನು ಕೆಲಸಕ್ಕೆಂದು ಊರಿಗೆ ಹೋಗಿದ್ದಾರೆ, ಮಕ್ಕಳು ಕಾಲೇಜ್ ಗೆ ಹೋಗಿದ್ದಾರೆ. ಈ ವೇಳೆ ಆಕೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ಮನೆಯಿಂದ ನಾಪತ್ತೆಯಾದ ಪುಷ್ಪಕಲಾ ಗಂಡನಿಗೆ ವಾಟ್ಸಾಪ್ ನಲ್ಲಿ ಆಡಿಯೋ ಮೆಸೇಜ್ ಕಳಿಸಿದ್ದು, ತನ್ನಗೆ ಯಾರೋ ಮೋಸ ಮಾಡಿದ್ದು, ವಿಷ ಕುಡಿದು ಸಾಯುವುದಾಗಿ ಹೇಳಿದ್ದಾಳೆ, ಗಂಡ ರುದ್ರಆರಾಧ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ. 

ಪುಷ್ಪಕಲಾ ನಾಪತ್ತೆ ಪ್ರಕರಣ ಚೀಟಿದಾರರ ಆತಂಕಕ್ಕೆ ಕಾರಣವಾಗಿದೆ. ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಸೇರಿದ ಚೀಟಿದಾರರು ಪುಷ್ಪಕಲಾಳ ವಂಚನೆಯನ್ನ ಬಯಲು ಮಾಡಿದ್ದಾರೆ. ಕನ್ನಡಪರ ಹೋರಾಟಗಾರರಾದ ರಾಮಕೃಷ್ಣ ಮಾತನಾಡಿ, ಚೀಟಿದಾರರಿಗೆ ಧೈರ್ಯ ಹೇಳಿದ ಅವರು, ಬಡ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಮಹಿಳೆಯರು, ಗಾರೆ ಕೆಲಸಗಾರರು ತಮ್ಮ ದುಡಿಮೆ ಹಣದೊಂದಿಗೆ ಪುಷ್ಪಕಲಾ ಪರಾರಿಯಾಗಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮದ ಮೂಲಕ ಬಡವರಿಗೆ ಹಣ ಕೊಡಿಸುವ ಕೆಲಸ ಮಾಡುವುದಾಗಿ ಹೇಳಿದರು. 

ನಿವೃತ್ತ ಶಿಕ್ಷಕ ಗಜೇಂದ್ರ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಪುಷ್ಪಕಲಾ ಶಿಸ್ತಿನಿಂದ ಚೀಟಿ ವ್ಯವಹಾರ ನೆಡೆಸುತ್ತಿದ್ದರು. ಇದೇ ನಂಬಿಕೆ ಮೇಲೆ ನಾನು ಸಹ ನಾಲ್ಕೈದು ಚೀಟಿಗಳ ಹಾಕಿದ್ದೇ.. ಚೀಟಿ ಕಂತು ಕಟ್ಟಲು ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಹಣವನ್ನ ಪೋನ್ ಪೇ, ಅಕೌಂಟ್ ಮೂಲಕ ಪಾವತಿ ಮಾಡಿದ್ದೇನೆ, ಆಕೆಯ ವಂಚನೆಯಿಂದ ಸುಮಾರು 35 ಲಕ್ಷ ಹಣವನ್ನ ಕಳೆದುಕೊಂಡಿದ್ದೇನೆ. ಇನ್ನೂ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಚೀಟಿ ದಂಧೆ ನಡೆಯುತ್ತಿದ್ದು ಇವುಗಳಿಗೆ ಕಡಿವಾಣ ಹಾಕಿದ್ದಾಗ ಮಾತ್ರ ಇಂತಹ ವಂಚನೆಗಳನ್ನ ತಡೆಗಟ್ಟ ಬಹುದೆಂದರು. 

 ಕೆಲ ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. 2005   ರಲ್ಲಿ ಹೊಸ ಚೀಟಿ ಆರಂಭಿಸಿದ್ದರು. ಸುಮಾರು 60 ಮಂದಿ ಪ್ರತಿ ತಿಂಗಳು ಅವರ ಬಳಿ ಚೀಟಿ ಹಣ ಕಟ್ಟುತ್ತಿದ್ದೆವು. ಆದರೆ, ಈ ಬಾರಿ ಅನ್ಯಾಯ ಮಾಡಿದ್ದಾರೆ. ನಾವು ಕೂಲಿ ಮಾಡಿ ಜೀವನ ಸಾಗಿಸುವವರು. ಆದ್ದರಿಂದ ಆರೋಪಿಗಳನ್ನು ಪತ್ತೆ ಮಾಡಿ ತಮ್ಮ ಹಣವನ್ನು ತಮಗೆ ವಾಪಸ್ ಕೊಡಿಸಬೇಕು,” ಎಂದು ಮೋಸ ಹೋದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";