ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು (ಕೆಯುಡಬ್ಲೂಜೆ) ತುಮಕೂರು ಜಿಲ್ಲಾ ಸಂಘದ ಆತಿಥ್ಯದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ವಾರ್ಷಿಕ –2024 ಕ್ರೀಡಾಕೂಟವನ್ನು ತುಮಕೂರಿನ ಮಹಾತ್ಮಗಾಂದಿ ಕ್ರೀಡಾಂಗಣದಲ್ಲಿ ನ.24 ರಂದು ಭಾನುವಾರ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಸ್ಪರ್ಧೆಯ ಎಲ್ಲಾ ವಿಭಾಗದಲ್ಲಿ (ಇಲ್ಲಿ ನಮೂದಿಸಿದ ಸ್ಪರ್ಧೆಗಳು ಮಾತ್ರ. ಅದರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದ ಕ್ರೀಡಾಪಟುಗಳಿದ್ದರೆ ಆದ್ಯತೆ ಕೊಡಿ) ಇಬ್ಬರ ಹೆಸರುಗಳನ್ನು ಜಿಲ್ಲಾ ಸಂಘಗಳು ಪಟ್ಟಿ ಮಾಡಿ ರಾಜ್ಯ ಮಟ್ಟದ ಕ್ರೀಡಾಕೂಟದ ಸ್ಪರ್ಧೆಗೆ ದಿನಾಂಕ 15.11.2024ರೊಳಗೆ ರಾಜ್ಯ ಸಂಘದ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಕಬ್ಬಡ್ಡಿಗೆ ಪ್ರತಿ ಜಿಲ್ಲೆಯಿಂದ ಒಂದು ತಂಡವನ್ನು ಮಾತ್ರ ಕಳುಹಿಸಬೇಕು. ತಾವು ಕಳುಹಿಸುವ ಸ್ಪರ್ಧಿಗಳು ಸಂಘದ ಸದಸ್ಯರಾಗಿರಬೇಕು ಮತ್ತು ವಯಸ್ಸಿನ ದಾಖಲೆಗಳನ್ನು (ಆಧಾರ್, ಡಿಎಲ್, ಮಾರ್ಕ್ಸ್ ಕಾರ್ಡ್ ಇತ್ಯಾದಿ) ತಪ್ಪದೇ ತರಬೇಕು.
1)40 ವರ್ಷದೊಳಗೆ,
2) 40 ವರ್ಷ ಮೇಲ್ಪಟ್ಟು 50 ವರ್ಷದೊಳಗೆ,
3) 50 ವರ್ಷ ಮೇಲ್ಪಟ್ಟು.
ಹೀಗೆ ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳಿವೆ.
100 ಮೀಟರ್ ಓಟ, 200 ಮೀಟರ್ ಓಟ, ಲಾಂಗ್ ಜಂಪ್, ಶಾಟ್ ಪುಟ್, ಕಬ್ಬಡ್ಡಿ ವಿಭಾಗದಲ್ಲಿ ಸ್ಪರ್ಧೆಗಳಿವೆ. ಪ್ರತಿ ಸ್ಪರ್ಧೆಗೂ ಜಿಲ್ಲೆಯಿಂದ ಒಬ್ಬರನ್ನು ಕಳುಹಿಸಿಕೊಡಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿ ಜಿಲ್ಲಾ ಸಂಘದಿಂದಲೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಕೂಟ ಯಶಸ್ವಿಗೆ ಕೈಜೋಡಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ವಿನಂತಿಸಿದ್ದಾರೆ.
ವಸತಿ ಅಗತ್ಯವಿದ್ದವರು ಮತ್ತು ಹೆಚ್ಚಿನ ಮಾಹಿತಿಗಾಗಿ ತುಮಕೂರು ಜಿಲ್ಲಾ ಸಂಘವನ್ನು ಸಂಪರ್ಕಿಸಬಹುದು.
ಚಿ.ನೀ.ಪುರುಷೋತ್ತಮ, ಅಧ್ಯಕ್ಷರು– 9880742680,
ಟಿ.ಇ.ರಘುರಾಮ್, ಪ್ರಧಾನ ಕಾರ್ಯದರ್ಶಿ –9538744656,
ಸತೀಶ್ ಹಾರೊಗೆರೆ–ಕ್ರೀಡಾ ಸಂಚಾಲಕ – 8970705196,
ಯಶ್ ಪದ್ಮನಾಬ್– 8971114148