ಕೆಪಿಎಸ್‍ಸಿ: ವಯೋಮಿತಿ ಸಡಿಲಿಕೆ, ಅರ್ಜಿ ಸಲ್ಲಿಸಲು ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ
ಲೋಕಸೇವಾ ಆಯೋಗವು 2023-24ನೇ ಸಾಲಿನಲ್ಲಿ ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು70 (.ಮೂ.) ಮತ್ತು 06 (ಹೈ.) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ  2024 ನೇ ಮಾರ್ಚ್ 14 ರಂದು ಅಧಿಸೂಚನೆಗಳನ್ನು ಹೊರಡಿಸಿರುತ್ತದೆ.

- Advertisement - 

ಅಧಿಸೂಚನೆಗೆ ಸಂಬಂಧಿಸಿದಂತೆ ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಅಧಿಸೂಚನೆಗಳಲ್ಲಿನ ಮೋಟಾರು ವಾಹನ ನಿರೀಕ್ಷಕರು70 (.ಮೂ.ವೃ) ಮತ್ತು 06 (ಹೈ.) ಹುದ್ದೆಗಳಿಗೆ ಸಾಮಾನ್ಯ ಆರ್ಹತೆ38 ವರ್ಷಗಳು,

- Advertisement - 

ಪ್ರವರ್ಗ 2, 2ಬಿ, 3 ಮತ್ತು 3ಬಿ41 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ1- 43 ವರ್ಷಗಳುಎಂಬುದಾಗಿ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿ, ತಿದ್ದುಪಡಿ ಅಧಿಸೂಚನೆಯನ್ನು ಅಕ್ಟೋಬರ್ 30 ರಂದು ಹೊರಡಿಸಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳಿಗೆ ನವೆಂಬರ್ 5 ರಿಂದ 20 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.

 ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಕ್ಟೋಬರ್ 30 ತಿದ್ದುಪಡಿ ಅಧಿಸೂಚನೆ ಹಾಗೂ 2024 ನೇ ಮಾರ್ಚ್ 14 ಮೂಲ ಅಧಿಸೂಚನೆಗಳನ್ನು ಆಯೋಗದ ವೆಬ್ಸೈಟ್ http://kpsc.kar.nic.in/Lists  ನಲ್ಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";