ತೋಟಗಾರಿಕೆ ಇಲಾಖೆಯಿಂದ ‘ಝೇಂಕಾರ’ ಬ್ರ್ಯಾಂಡ್ ಹೆಸರಿನ ಜೇನುತುಪ್ಪ ಮಾರಾಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು “ಝೇಂಕಾರಬ್ರ್ಯಾಂಡ್ ಹೆಸರಿನಲ್ಲಿ  ಮತ್ತು  ಜೀವನೋಲ್ಲಾಸಕ್ಕೆ ಜೇನು ಟ್ಯಾಗ್ಲೈನ್ನಲ್ಲಿ’  ಎಂಬ

- Advertisement - 

ಲೋಗೋ ಮತ್ತು ಪ್ಯಾಕೇಜಿಂಗ್ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸಿ ಖಿಡಿಚಿಜe ಒಚಿಡಿಞ egisಣಡಿಥಿ ಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿರುತ್ತದೆ. ತೋಟಗಾರಿಕೆ ಇಲಾಖೆಯು ಸದರಿ ಬ್ರ್ಯಾಂಡ್ ಮಾಲೀಕತ್ವವನ್ನು ಹೊಂದಿರುತ್ತದೆ.  

- Advertisement - 

ಪ್ರಸ್ತುತ ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಸದರಿ ಬ್ರ್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಲು ಕೋರಿದೆ.

  ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ತೋಟಗಾರಿಕೆ ಇಲಾಖೆಯ ವೆಬ್ಸೈಟ್  https://horticulturedir.karnataka.gov.in  ಅಥವಾ ಮೇಲ್ additionaldirectoropdp@gmail.com,  ಅಪರ ನಿರ್ದೇಶಕರು,

- Advertisement - 

ತಾಳೆಬೆಳೆ ವಿಭಾಗ, ತೋಟಗಾರಿಕೆ ನಿರ್ದೇಶನಾಲಯ, ಲಾಲ್ ಬಾಗ್, ಬೆಂಗಳೂರು ಹಾಗೂ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share This Article
error: Content is protected !!
";