ಪೊಲೀಸ್ ಇಲಾಖೆಗೆ ಖಾತೆ ಮಾಡುವಂತೆ ಕರವೇ ಒತ್ತಾಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಗಂಗಾಧರ ಪುರ ಗ್ರಾಮದ ಸರ್ವೇ ನಂಬರ್ 111ರಲ್ಲಿದ್ದ ಪೊಲೀಸ್ ವಸತಿ ಗೃಹ ದ ಜಾಗವನ್ನು ಪೊಲೀಸ್ ಇಲಾಖೆಗೆ ಖಾತೆ ಮಾಡಿ ಕೊಡುವಂತೆ ತಾಲೂಕು ಆಡಳಿತವನ್ನು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಸ್ಥಾಪಕಾಧ್ಯಕ್ಷ ಬಿ. ಎಸ್. ಚಂದ್ರಶೇಖರ್ ಒತ್ತಾಯಿಸಿದ್ದಾರೆ.

           ಸದರಿ ಜಾಗವನ್ನು ಪೊಲೀಸ್ ಇಲಾಖೆಗೆ ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ತಹಸೀಲ್ದಾರ್ ರವರಿಗೆ ಮನವಿಪತ್ರ ಅರ್ಪಿಸಿ ಸುದ್ಧಿಗಾರ ರೊಂದಿಗೆ ಚಂದ್ರು ಮಾತನಾಡಿ ಗಂಗಾಧರ ಪುರ ಸರ್ವೇ ನಂಬರ್ 111ರ ಸುಮಾರು 3ಎಕರೆ 1ಗುಂಟೆ ಜಾಗವಿದ್ದು ಅದರಲ್ಲಿ ಸುಮಾರು 70..80ವರ್ಷಗಳಿಂದ ಪೊಲೀಸ್ ಕ್ವಾಟ್ರೆಸ್ ಇದ್ದು, ಇತ್ತೀಚಿನ ದಿನಗಳಲ್ಲಿ ವಸತಿ ಗೃಹಗಳು ಶಿತಿಲ ಗೊಂಡು ಹಾಳಾಗಿರುವುದರಿಂದ ಅಲ್ಲಿ ಇಲಾಖೆಯವರು ವಾಸವಿಲ್ಲ.

ಕಳೆದ ಕೆಲವು ವರ್ಷಗಳಿಂದ ಈ ಜಾಗ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಖಾತೆ ಇದ್ದು ಅದಕ್ಕೆ ಸಂಪೂರ್ಣ ದಾಖಲೆಗಳಿಲ್ಲವೆಂದು ತಿಳಿದು ಬಂದಿದೆ. ಅದರಿಂದ ಸದರಿ 111ರ ಮೂರು ಎಕರೆ ಜಾಗದಲ್ಲಿ ಸ್ವಲ್ಪ ಭಾಗ ಕ್ರೀಡಾಂಗಣಕ್ಕೆ ಬಲಡಿಕೊಳ್ಳಲಾಗಿದ್ದು ಉಳಿಕೆ ಜಾಗವನ್ನು ಮೂಲ ಪೊಲೀಸ್ ಇಲಾಖೆಯ ಬಳಕೆಗೋಸ್ಕರ ಇಲಾಖೆಗೆ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ನಮ್ಮ ಸಂಘಟನೆ ಒತ್ತಾಯಿಸುತ್ತದೆ ಎಂದ ಚಂದ್ರು ಈಗಾಗಲೇ ಈ ಜಾಗ ಭೂಗಳ್ಳವ್ಯಕ್ತಿಗಳಿಂದ ಮಾರಾಟ ಪ್ರಕ್ರಿಯೆ ನಡೆದಿದ್ದು

ಈ ಕೂಡಲೇ ತಾಲೂಕು ಆಡಳಿತ ಎಚ್ಛೇತ್ತು ಸರ್ಕಾರಿ ಜಾಗ ಖಾಸಗಿಯವರ ಪಾಲಾಗದಂತೆ ಕ್ರಮ ತೆಗೆದು ಕೊಳ್ಳಲು ಅಗ್ರಹಿಸಿ ಈಗಾಗಲೇ ದಿ. 21.9.24ರಲ್ಲಿ ಪೊಲೀಸ್ ಇಲಾಖೆಗೆ ಖಾತೆ ಮಾಡುವಂತೆ ನಮ್ಮ ಸಂಘಟನೆಯಿಂದ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದು ಇದುವರೆಗೆ ಖಾತೆ ಆಗಿಲ್ಲ. ಆದ್ದರಿಂದ ತುರ್ತಾಗಿ ಖಾತೆ ಮಾಡಲು ಅಗ್ರಹಿಸಿ ಮನವಿ ಪತ್ರ ಕೊಟ್ಟಿದ್ದೇವೆ ಎಂದು ಚಂದ್ರು ತಿಳಿಸಿದರು.

 ಪೊಲೀಸ್ ಸಮವಸ್ತ್ರದಲ್ಲಿ ಬಂದು ತಹಶೀಲ್ದಾರರಿಗೆ ಚಂದ್ರು ಮನವಿಸಲ್ಲಿಸಿದ್ದು ವಿಶೇಷವಾಗಿತ್ತು. ಕರವೇ ಕನ್ನಡಿಗರ ಬಣದ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";