ನ.12ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಎಲ್ ಅಂಡ್ ಟಿ ಫೈನಾನ್ಸಿಯಲ್ ಸರ್ವೀಸಸ್ ಹಾಗೂ ಮ್ಯಾಫ್ ಗಾರ್ಮೆಂಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಲುವಾಗಿ ನವೆಂಬರ್ ೧೨ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ಹಾಜರಾಗಬಹುದಾಗಿದೆ.

 ಪಿ.ಯು.ಸಿ., ಐ.ಟಿ.ಐ, ಡಿಪ್ಲೊಮಾ(ಯಾವುದೇ ಟ್ರೇಡ್), ಯಾವುದೇ ಪದವಿ ಪಾಸಾದ ಹಾಗೂ ಟೈಲರಿಂಗ್ ಅರ್ಹತೆ ಹೊಂದಿದವರು (ಟೈಲರಿಂಗ್‌ನಲ್ಲಿ ಅರ್ಹತೆ ಇಲ್ಲದ ಅಭ್ಯರ್ಥಿಗಳಿಗೆ ತರಬೇತಿ ನೀಡಿ ನೇಮಕಾತಿ ಮಾಡಲಾಗುವುದು) ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. 

 ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೧೬-೨೨೭೮೪೮೮, ಮೊ.ಸಂ. ೯೦೭೧೦೨೧೧೪೩, ೯೫೧೩೧೩೬೬೪೨ನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";