ಚಂದ್ರವಳ್ಳಿ ನ್ಯೂಸ್, ತುಮಕೂರು:
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿ ಕಸಬಾ ಹೋಬಳಿ ಗಿರಿಗೌಡನಪಾಳ್ಯ ಗ್ರಾಮದ ಸುಮಾರು ೧೩ ವರ್ಷದ ಗಿರೀಶ್ ಜಿ.ಎಂ. ಎಂಬ ೭ನೇ ತರಗತಿ ವಿದ್ಯಾರ್ಥಿಯು ಅಕ್ಟೋಬರ್ ೨೬ರಂದು ಶಾಲೆಗೆ ಹೋಗುವುದಾಗಿ ತಿಳಿಸಿ ಹೋದವನು ಮರಳಿ ಬಂದಿಲ್ಲವೆಂದು ಈತನ ತಾಯಿ ಕವಿತಾ ಠಾಣೆಗೆ ದೂರು ನೀಡಿದ್ದಾರೆ.
ಈತನು ೧೨೨ ಸೆಂ.ಮೀ. ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುವ ಈತನು ಕಾಣೆಯಾದ ಸಂದರ್ಭದಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದನು.
ಈತನ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ದೂ.ವಾ.ಸಂ. ೦೮೧೩೨-೨೨೦೨೨೯, ೦೮೧೬-೨೨೭೨೪೫೧ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.