ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ IAS ಅಧಿಕಾರಿಗಳ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸನ್ಮಾನಿಸಿದರು.
ಕರ್ನಾಟಕ IAS ಅಧಿಕಾರಿಗಳ ಸಂಘದ ಅಧ್ಯಕ್ಷ ಎಲ್ ಕೆ ಅತೀಕ್ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರು ಒಟ್ಟಿಗೆ ಅಮರನಾರಾಯಣ ಅವರನ್ನು ಸನ್ಮಾನಿಸಿದರು.
ಕೆ.ಅಮರನಾರಾಯಣ ಅವರಿಗೆ ಪರಿಸರ ಕ್ಷೇತ್ರದಿಂದ 2020ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುತ್ತದೆ. ಇದರ ಅಂಗವಾಗಿ ಐಎಎಸ್ ಅಧಿಕಾರಿಗಳ ಸಂಘದ ವತಿಯಿಂದ ಸನ್ಮಾನಿಸುವ ಪದ್ಧತಿ ಇದೆ. ಹಾಗಾಗಿ ಅವರನ್ನು ಅಧ್ಯಕ್ಷರು, ಮುಖ್ಯಕಾರ್ಯದರ್ಶಿಗಳು ಸನ್ಮಾನಿಸಿದ್ದಾರೆ.