![](https://www.chandravallinews.com/wp-content/uploads/2023/01/f6a0bb05-ee3b-4aa0-9ebe-5b78aa46e634.jpg)
i
ಚಿತ್ರದುರ್ಗದ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿನಿ ಮೊನಾಲ್ ನಾಪತ್ತೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಐ ಯು ಡಿ ಪಿ ಲೇ ಔಟ್ ನಿಂದ ಎಂ.ಮೊನಾಲ್(11) ಎನ್ನುವ ವಿದ್ಯಾರ್ಥಿನಿ ಕಾಣೆಯಾಗಿದ್ದಳು.
ಚಿತ್ರದುರ್ಗ ನಗರದ ಡಾನ್ ಬಾಕ್ಸೋ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಮೊನಾಲ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎನ್ನುವ ಕಾರಣಕ್ಕೆ ಮನೆಯಲ್ಲಿ ಯಾರಿಗೂ ಹೇಳದೆ ಗುರುವಾರ ಶಾಲೆಗೆ ಹೋಗುವುದಾಗಿ ಆಟೋದಲ್ಲಿ ತೆರಳಿದ ಬಾಲಕಿ ಕೆಎಸ್ಆರ್ ಟಿಸಿ ಬಸ್ ಮೂಲಕ ಹುಬ್ಬಳ್ಳಿ ಕಡೆಗೆ ಪ್ರಯಾಣ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ ಓರ್ವ ಮಹಿಳೆಯೊಬ್ಬರು ಶಿಗ್ಗಾವಿ ಬಳಿ ಬಸ್ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಬಾಲಕಿಯನ್ನು ವಿಚಾರಿಸಿದಾಗ ಮನೆ ಬಿಟ್ಟು ಬಂದಿರುವ ವಿಷಯ ಗೊತ್ತಾಗಿ ಕೂಡಲೇ ಅವರ ಪೋಷಕರನ್ನು ಸಂಪರ್ಕಿಸಿ ಮಗು ನನ್ನ ಜೊತೆ ಇದೆ ಎಂದು ತಿಳಿಸಿದಾಗ ಹುಬ್ಬಳ್ಳಿಯ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ಸುರಕ್ಷಿತವಾಗಿ ಚಿತ್ರದುರ್ಗದ ಪೋಷಕರ ಮನೆಗೆ ಕಳುಹಿಸಿ ನಾಪತ್ತೆ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಈ ಕುರಿತು ಬಾಲಕಿಯ ತಂದೆ ಸೈಪುದ್ದೀನ್ ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮಾತನಾಡಿ, ಶಿಗ್ಗಾವಿ ಬಳಿ ಮಹಿಳೆಯೊಬ್ಬರು ತಮ್ಮ ಪುತ್ರಿಯನ್ನು ಹುಬ್ಬಳ್ಳಿಯಲ್ಲಿನ ಪೊಲೀಸರಿಗೆ ಸುರಕ್ಷಿತವಾಗಿ ಒಪ್ಪಿಸಿದ್ದು ಅವರಿಗೆ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಶೇರ್ ಆಗಿ ಪುತ್ರಿ ಪತ್ತೆ ಆಗಲು ಅನುಕೂಲ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಸೈಪುದ್ದೀನ್ ತಿಳಿಸಿದ್ದಾರೆ.