ಚರ್ಮರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಿ. ೮
, ೯ ಹಾಗೂ ೧೦ರಂದು ಭಾರತೀಯ ಚರ್ಮರೋಗ ತಜ್ಞರ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿರುವ ಕ್ಯೂಟಿಕಾನ್ ಕರ್ನಾಟಕ – ೨೪ರ ೧೫ನೇ ವಾರ್ಷಿಕ ರಾಜ್ಯಮಟ್ಟದ ಚರ್ಮರೋಗ ತಜ್ಞರ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಡಾ. ಮಿತಾಕ್ಷರಿ ಎಂ. ಹೂಗಾರ ಮಾತನಾಡಿ, ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ನಮಗೆ ಸಂತಸ ತಂದಿದೆ. ಈ ಸಮ್ಮೇಳನ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನನ್ನದು. ಬರೀ ದೊಡ್ಡ ನಗರಗಳಲ್ಲಿ ಮಾತ್ರವಲ್ಲ ಇಂಥ ನಗರಗಳಲ್ಲೂ ಸಮ್ಮೇಳನಗಳನ್ನು ಮಾಡುವುದರ ಜತೆಗೆ ಜನರಲ್ಲಿ ಚರ್ಮರೋಗದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಚಿತ್ರದುರ್ಗ ಇಂದು ಒನಕೆ ಓಬವ್ವನಿಂದ ದಂಥಕಥೆಯಾಗಿ ಉಳಿದಿದೆ.

ಒನಕೆ ಓಬವ್ವ ಕೂಡ ಕೋಟೆ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದರು ಹಾಗೂ ತ್ಯಾಗ ಮಾಡಿದರು. ಚರ್ಮರೋಗಕ್ಕೆ ಸಂಬಂಧಿಸಿದಂತೆ ಇಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ನಾವು ಚಿಕ್ ಚಿಕ್ಕ ಶಾಲೆ, ಕಾನ್ವೆಂಟ್‌ಗಳನ್ನು ತಲುಪಿ ಅವರಿಗೆ ಜಾಗೃತಿ ಮೂಡಿಸಬೇಕು. ಈ ಸಮ್ಮೇಳನಕ್ಕೆ ಉತ್ತಮ ಚರ್ಮರೋಗ ತಜ್ಞರು ಬಂದಿದ್ದಾರೆ. ಜಾಗೃತಿ ಬಗ್ಗೆ ಉತ್ತಮ ಪ್ರಬಂಧಗಳು ಮಂಡನೆಯಾಗುತ್ತಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಸಿಗೆ ನೀರೆರೆಯುವ ಮೂಲಕ ಕ್ಯೂಟಿಕಾನ್-೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಚರ್ಮರೋಗ ತಜ್ಞರ ಸಂಘದ ಅಧ್ಯಕ್ಷ ಡಾ. ಮಂಜುನಾಥ ಶೆಣೈ, ಐಎಡಿವಿಎಲ್‌ನ ರಾಷ್ಟ್ರೀಯ ಅಧ್ಯಕ್ಷನಾಗಿರುವುದು ನನಗೆ ಹೆಮ್ಮೆ. ಅನೇಕರು ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಐಎಡಿವಿಎಲ್ ಪ್ರಮುಖ ಶಾಖೆ. ಇತರೆ ರಾಜ್ಯಗಳಿಗೆ ಮಾತ್ರವಲ್ಲ ಕರ್ನಾಟಕ ಐಎಡಿವಿಎಲ್ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ರಾಜ್ಯ ಶಾಖೆಯು ಚರ್ಮರೋಗಕ್ಕೆ ಸಂಬಂಧಿಸಿದಂತೆ ಉತ್ತಮ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿದೆ. ರಾಷ್ಟ್ರೀಯ ಐಎಡಿವಿಎಲ್ ಸಂಖ್ಯಾ ಆಧಾರದ ಮೇಲೆ ಪ್ರಪಂಚದಲ್ಲಿ ಎರಡನೇ ದೊಡ್ಡ ಸಂಘ. ಶೈಕ್ಷಣಿಕ ಬೆಳವಣಿಗೆಗೆ ನಮ್ಮ ಕೊಡುಗೆ ದೊಡ್ಡದು. ನಾವು ಗರಿಷ್ಟ ಪ್ರತಿಜ್ಞೆಗಳನ್ನು ಹೊಂದುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದೇವೆ.

ರಾಷ್ಟ್ರೀಯ ಮಾಧ್ಯಮಗಳು ನಮಗೆ ಪ್ರಚಾರ ನೀಡಿವೆ. ಚರ್ಮ ರೋಗದ ವಿಷಯದಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ನಾವು ಸಾಕಷ್ಟು ಕಂಡಿದ್ದೇವೆ. ಕಾರಣ ಐಎಡಿವಿಎಲ್ ಕೊಡುಗೆ ಅಪಾರವಾದುದು. ಡಿಜಿಟಲ್ ಡೆರ್ಮಟಾಲಜಿ ಬಗ್ಗೆ ಸಾಕಷ್ಟು ಕೊಟ್ಟಿದ್ದೇವೆ. ಇದಕ್ಕೆ ಕ್ಯೂಟಿಕಾನ್ ಕರ್ನಾಟಕದ ಸದಸ್ಯರ ಕೊಡುಗೆ ಅಪಾರವಾದುದು ಎಂದು ಹೇಳಿದರು.

ಮುಖ್ಯಅತಿಥಿ ಡಾ. ಪಿ.ಎಸ್. ಶಂಕರ್ ಮಾತನಾಡಿ, ನಮ್ಮ ಜ್ಞಾನವನ್ನು ಇಂದು ಹೆಚ್ಚಿಸಿಕೊಳ್ಳಬೇಕಿದೆ. ಬದಲಾದ ಹವಾಮಾನದಲ್ಲಿ ಅನೇಕ ರೀತಿಯ ಚರ್ಮರೋಗಗಳು ಬರುತ್ತಿವೆ. ಅದಕ್ಕೆ ಸರಿಯಾಗಿ ವೈದ್ಯಲೋಕ ಎಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡಿದೆ. ನಮ್ಮ ಆರೋಗ್ಯ ನಮ್ಮ ಕೈಲಿದೆ ಎಂದರು.

ಕೆ.ಸಿದ್ದಪ್ಪ ಸ್ಮರಣಾರ್ಥ ಜೀವಮಾನ ಸಾಧನೆಗಾಗಿ ಐಎಡಿವಿಎಲ್ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ಡಾ. ಜಯದೇವ ಬೆಟ್ಕರೂರ್, ನನಗೆ ಎರಡು ಕುಟುಂಬ ಇದೆ. ಮೊದಲನೆಯದು ನನ್ನ ಹೆಂಡತಿ ಮಕ್ಕಳು, ಎರಡನೆಯದು ನನ್ನ ವೃತ್ತಿ. ನನಗೆ ಎಲ್ಲರ ಸಹಕಾರ ಸಿಕ್ಕಿದ್ದರಿಂದ ನಾನು ಈ ಸಾಧನೆ ಮಾಡಲಾಯಿತು. ನನ್ನನ್ನು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದರು.

ಬೆಂಗಳೂರು ಮೆಡಿಕಲ್ ಕಾಲೇಜಿನ ಡಾ. ಶಿಲ್ಪ ಅವರಿಗೆ ಐಎಡಿವಿಎಲ್ ಚರ್ಮ ವಿಭಾಗದ ಉತ್ತಮ ವೈದ್ಯೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಡಾ. ಮಹೇಶ್‌ಕುಮಾರ್, ಡಾ. ಎನ್. ಆನಂದಪ್ಪ, ಡಾ. ಮಂಜುನಾಥ ಹುಲಮನೆ, ಕಾಲೇಜಿನ ಡೀನ್ ಡಾ. ಪ್ರಶಾಂತ್ ಜಿ. ವೇದಿಕೆಯಲ್ಲಿದ್ದರು.

ವರ್ಷಿಣಿ ಪ್ರಾರ್ಥಿಸಿದರು. ಡಾ. ಎಂ. ಯೋಗೇಂದ್ರ ಸ್ವಾಗತಿಸಿದರು. ಅಮೃತ ಎಂ ಮತ್ತು ಅಶ್ವಿನಿ ಎಂ. ನಿರೂಪಿಸಿದರು. ಡಾ. ರಘು ಎಂ.ಟಿ. ವಂದಿಸಿದರು.

 

- Advertisement -  - Advertisement - 
Share This Article
error: Content is protected !!
";