ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಕಾಂಚಾಣ ಸದ್ದು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚನ್ನಪಟ್ಟಣ ಉಪಚುನಾವಣೆಯಲ್ಲಿ ಭ್ರಷ್ಟ ಕಾಂಗ್ರೆಸ್‌ಸರ್ಕಾರದ ಕಾಂಚಾಣ ಸದ್ದು ಮಾಡುತ್ತಿದ್ದು ಖಾತೆ ಸಚಿವರೊಬ್ಬರು
ಬಹಿರಂಗವಾಗಿ ಹಣ ಹಂಚುತ್ತಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿ ಆರೋಪಿಸಿದೆ.

- Advertisement - 

ರಾಜ್ಯದಲ್ಲಿ ಪರ್ಸಂಟೇಜ್‌ಕಾಂಗ್ರೆಸ್‌ಸರ್ಕಾರ ತೊಲಗಿಸಿ ಚನ್ನಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಮಾಡೋಣ ಎಂದು ಅದು ಕರೆ ನೀಡಿದೆ. ಕಾಂಗ್ರೆಸ್ ಸರ್ಕಾರ ಆಡಳಿತಯಂತ್ರವನ್ನು, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಮತದಾರರಿಗೆ ಹಲವು ಆಮೀಷಗಳನ್ನು ಒಡ್ಡುತ್ತಿದೆ.

- Advertisement - 

ಪ್ರಚಾರದ ವೇಳೆ ಸಾರ್ವಜನಿಕವಾಗಿ ಜಮೀರ್‌ಅಹಮದ್‌ಗರಿ ಗರಿ ನೋಟುಗಳನ್ನು ಕೊಟ್ಟು ಜನರಿಗೆ ಮತಹಾಕುವಂತೆ ಒತ್ತಡ ಹೇರಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ಕಾಂಗ್ರೆಸ್‌ನಾಯಕರ ಈ ಹಣ ಹಂಚಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಚಿವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಾತ್ಯತೀತ ಜನತಾದಳ ಪಕ್ಷ ಆಗ್ರಹಿಸಿದೆ.

- Advertisement - 

 

 

Share This Article
error: Content is protected !!
";